ಹೈದರಾಬಾದ್, ಜ.02 (DaijiworldNews/AA): ರೆಬೆಲ್ ಸ್ಟಾರ್ ಪ್ರಭಾಸ್ ಅವರು ತೆಲಂಗಾಣ ಸರ್ಕಾರದ ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಅವರು ಡ್ರಗ್ಸ್ ಬೇಡ ಎಂಬ ವೀಡಿಯೊವನ್ನು ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

'ನಮ್ಮ ಜೀವನದಲ್ಲಿ ಹಲವು ಖುಷಿಗಳಿವೆ. ಸಾಕಷ್ಟು ಮನರಂಜನೆ ಇದೆ. ಡಾರ್ಲಿಂಗ್ಸ್, ಡ್ರಗ್ಸ್ ಬೇಡ. ನಮ್ಮನ್ನು ಪ್ರೀತಿಸುವ ಮತ್ತು ಬದುಕುವ ಜನರಿರುವಾಗ ನಮಗೆ ಈ ಡ್ರಗ್ಸ್ ಬೇಕೇ? ಡ್ರಗ್ಸ್ ತೆಗೆದುಕೊಳ್ಳಬೇಡಿ. ನಿಮಗೆ ತಿಳಿದಿರುವ ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ, ಇಂದೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ. ಅವರ ಸಂಪೂರ್ಣ ಚೇತರಿಕೆಗೆ ತೆಲಂಗಾಣ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ನಟ ಪ್ರಭಾಸ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಹೇಳಿದಂತೆ ಫ್ಯಾನ್ಸ್ ಫಾಲೋ ಮಾಡುತ್ತಾರೆ. ಹೀಗಾಗಿಯೇ ಸರ್ಕಾರಿ ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ಇದೀಗ ಪ್ರಭಾಸ್ ಅವರು ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ.