ಹೈದರಾಬಾದ್, ಜ.05 (DaijiworldNews/AA): ಟಾಲಿವುಡ್ ನಟಿ ಪೂನಂ ಕೌರ್ ಅವರು ಮತ್ತೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದು, ಅವರ ಮೇಲೆ ದೂರು ನೀಡಿದ್ದರೂ ಮಾ ಸಂಸ್ಥೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಟಿ ಪೂನಂ ಕೌರ್, ತ್ರಿವಿಕ್ರಮ್ ಶ್ರೀನಿವಾಸ್ ಮೇಲಿನ ದೂರನ್ನು 'ಮಾ' ಸಂಸ್ಥೆ ಸ್ವೀಕರಿಸಲಿಲ್ಲ. ಯಾವುದೇ ವಿಚಾರಣೆ ಮಾಡಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ. ಆತ ನನ್ನ ಜೀವನವನ್ನೇ ನಾಶ ಮಾಡಿ ಬಿಟ್ಟ ಎಂದು ಬರೆದುಕೊಂಡಿದ್ದಾರೆ. ಹಾಗಾದ್ರೆ 'ಮಾ' ಸಂಸ್ಥೆ ಯಾರ ಪರ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಟಿ ಪೂನಂ ಡೈರೆಕ್ಟರ್ ತ್ರಿವಿಕ್ರಮ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿರೋದಾಗಿ ಆರೋಪಿಸಿದ್ದರು. ಇದಕ್ಕೆ 'ಮಾ' ಸಂಸ್ಥೆ ಸ್ಪಂದಿಸಿ, ಎಕ್ಸ್ನಲ್ಲಿ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ತ್ರಿವಿಕ್ರಮ್ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು 'ಮಾ' ಚಲನಚಿತ್ರ ಕಲಾವಿದರ ಸಂಘ ಪೂನಂ ಆರೋಪಕ್ಕೆ ಉತ್ತರಿಸಿದೆ.