ಮುಂಬೈ, ಜ.16 (DaijiworldNews/AK): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚಾಕು ಇರಿತದ ಬಳಿಕ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಪರೇಷನ್ ಬಳಿಕ ನಟ ಪ್ರತಿಕ್ರಿಯಿಸಿ, ನಾನು ಕ್ಷೇಮವಾಗಿದ್ದೇನೆ. ಆಪಾಯದಿಂದ ಪಾರಾಗಿದ್ದಾನೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ ಅಂತ ಚೂರಿ ಇರಿತದ ಬಳಿಕ ಸೈಫ್ ಅಲಿ ಖಾನ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಎಲ್ಲಾ ಸತ್ಯಾಂಶ ಹೊರ ಬೀಳಲಿದೆ ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಸುಕಿನ ಜಾವ 2:30ರ ವೇಳೆಗೆ ಸೈಫ್ ಮನೆ ಮೇಲೆ ದಾಳಿ ನಡೆದಿದೆ. ರಾತ್ರಿ ದಾಳಿಕೋರ ಸೈಫ್ ಮನೆಗೆ ಬಂದಿದ್ದಾನೆ. ಈತ ಮನೆಗೆ ಬಂದಿದ್ದನ್ನು ನೋಡಿ ಕೆಲಸದಾಕೆ ಗಲಾಟೆ ಮಾಡಿದ್ದಾಳೆ. ಈ ಗಲಾಟೆಯ ಶಬ್ದ ಕೇಳಿ ಸೈಫ್ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದಾಗ ಸೈಫ್ ಮೇಲೆ ಅಟ್ಯಾಕ್ ಆಗಿದೆ.ಈ ವೇಳೆ ನಟನಿಗೆ 6 ಬಾರಿ ಚಾಕುವಿನಿಂದ ಇರಿತಗಳಾಗಿದ್ದು, ರಕ್ತದ ಮಡುವಿನಲ್ಲಿದ್ದ ತಂದೆಯನ್ನು ಇಬ್ರಾಹಿಂ ಅಲಿ ಖಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಟನಿಗೆ ಆಪರೇಷನ್ ಮಾಡಲಾಗಿದೆ.