ಮುಂಬೈ, ಜ.24(DaijiworldNews/AK): ಹಿರಿಯ ನಟಿ ಶ್ರೀದೇವಿ ಪುತ್ರಿ , ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಅವರು ತಿರುಮಲದಲ್ಲಿ ಮದುವೆಯಾಗುವ ಪ್ಲ್ಯಾನ್ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದಿದ್ದಾರೆ.
ಜಾನ್ವಿ ಕಪೂರ್ ತಿರುಮಲ ತಿಮ್ಮಪ್ಪನ ಭಕ್ತೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದಿದ್ದಾರೆ.
ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಶಿಖರ್ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.