ಮುಂಬೈ,ಜ.27 (DaijiworldNews/AK): ಬಾಲಿವುಡ್ ನಟ ಶಾರುಖ್ ಖಾನ್ ವಯಸ್ಸಾದರೂ ದಿನದಿಂದ ದಿನಕ್ಕೆ ಯೌವನವಾಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ದುಬೈಗೆ ತೆರಳಿ ‘ಗ್ಲೋಬಲ್ ವಿಲೇಜ್’ನಲ್ಲಿ ಭಾಗಿಯಾದ ವೇಳೆ ವೇದಿಕೆ ಮೇಲೆ ಅವರು ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅವರ ಡಾನ್ಸ್ ನ ವಿಡಿಯೋ ವೈರಲ್ ಆಗಿದೆ.

ಇದರ ಬೆನ್ನಲ್ಲೇ ಶಾರುಖ್ ಖಾನ್ ಅವರಿಗೆ ವಯಸ್ಸು ದಿನ ಕಳೆದಂತೆ ಹೆಚ್ಚುತ್ತಿದೆ. ಆದರೆ, ಅವರ ಲುಕ್ ಮಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಈ ವೇಳೆ ಮಾತನಾಡಿದ ಅವರು , ನಾನು ಈ ವರ್ಷ 60ಕ್ಕೆ ಕಾಲಿಡುತ್ತಿದ್ದೇನೆ.
ಆದರೆ, ನಾನು 30ರ ರೀತಿ ಕಾಣುತ್ತಿದ್ದೇನೆ. ಆದರೆ, ಕೆಲವು ವಿಚಾರಗಳನ್ನು ಮರೆಯುತ್ತೇನೆ ಎಂದಿದ್ದಾರೆ ಶಾರುಖ್ ಖಾನ್.ಈ ಮೂಲಕ ಮರೆವಿನ ಕಾಯಿಲೆ ಶುರುವಾಗಿದೆ ಆಗಿದೆ ಎಂದಿದ್ದಾರೆ.