ಮುಂಬೈ, ಫೆ.11 (DaijiworldNews/AA): ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಟಾಲಿವುಡ್ನಲ್ಲಿ ಅಷ್ಟೇ ಅಲ್ಲದೇ ಇದೀಗ ಬಾಲಿವುಡ್ ನಲ್ಲಿಯೂ ಕಮಾಲ್ ಮಾಡಲು ಹೊರಟಿದ್ದಾರೆ.

ಈಗಾಗಲೇ ಶ್ರೀಲೀಲಾ ಬಾಲಿವುಡ್ನಲ್ಲಿ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಪುತ್ರನಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗಾಗಿ ಭರ್ಜರಿ ಸಿದ್ಧತೆ ಕೂಡ ನಡೆಯುತ್ತಿದೆ. ಇದೀಗ ಈ ಬೆನ್ನಲ್ಲೇ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ನಟಿಸಲು ಶ್ರೀಲೀಲಾಗೆ ಅವಕಾಶ ದೊರೆತಿದೆ ಎನ್ನಲಾಗಿದೆ.
ಕಳೆದ ವರ್ಷ ಕಾರ್ತಿಕ್ ಆರ್ಯನ್ ನಿವಾಸದಲ್ಲಿ ನಡೆದ ಗಣೇಶ ಹಬ್ಬ ಆಚರಣೆಯಲ್ಲಿ ಶ್ರೀಲೀಲಾ ಭಾಗಿಯಾಗಿ ಪೂಜೆ ಸಲ್ಲಿಸಿದ್ದರು. ಹೀಗಾಗಿ ಕಾರ್ತಿಕ್ ಆರ್ಯನ್ ಜೊತೆಗೆ ಶ್ರೀಲೀಲಾ ನಟಿಸುತ್ತಾರೆ ಎಂಬ ವದಂತಿಗೆ ಪುಷ್ಠಿ ನೀಡಿದಂತಾಗಿದೆ. ಒಂದು ವೇಳೆ, ಈ ವದಂತಿ ನಿಜವೇ ಆದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೋಡಿ ಪ್ರೇಕ್ಷಕರನ್ನ ರಂಜಿಸಲಿದೆ.