ಚೆನ್ನೈ,ಏ.03(DaijiworldNews/AK): ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತ ಈಗ ಬಾಲಿವುಡ್ನಲ್ಲೂ ಹವಾ ಎಬ್ಬಿಸಿದ್ದಾರೆ. ಸುಮಾರು 15 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಸಮಂತಾ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಖಾಸಗಿ ಜೀವನದಲ್ಲಿ ಕೆಲ ಏರು-ಪೇರುಗಳಾದ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿರುವ ಸಮಂತಾ, ಈಗ ನಟಿಯಾಗಿ ಹಾಗೂ ಉದ್ಯಮಿಯಾಗಿ ಮಿಂಚುತ್ತಿದ್ದಾರೆ.

ಇದೀಗ ಅಭಿಮಾನಿಯೊಬ್ಬ ಸಮಂತಾಗಾಗಿ ದೇವಾಲಯವೊಂದನ್ನು ಕಟ್ಟಿದ್ದಾನೆ.ಆಂಧ್ರ ಪ್ರದೇಶದ ಏಲೂರು ಜಿಲ್ಲೆ, ಕೈಕಲೂರು ಮಂಡಲದ ಅಲ್ಲಪಡು ಗ್ರಾಮದಲ್ಲಿ ಅಭಿಮಾನಿಯೊಬ್ಬ ಸಮಂತಾರ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದಾನೆ.ಸಂದೀಪ್ ಹೆಸರಿನ ಅಭಿಮಾನಿ, ತನ್ನ ಮನೆಯ ಆವರಣದಲ್ಲಿಯೇ ಸಮಂತಾಗೆ ಗುಡಿ ನಿರ್ಮಿಸಿದ್ದಾನೆ. ಗುಡಿಯ ಒಳಗೆ ಸಮಂತಾರ ವಿಗ್ರಹ ಇಟ್ಟಿದ್ದಾನೆ. ಗುಡಿಯ ಮೇಲೆ ‘ದಿ ಟೆಂಪಲ್ ಆಫ್ ಸಮಂತಾ’ ಎಂದು ಬರೆಸಿದ್ದಾನೆ. ದೇವಾಲಯ ಉದ್ಘಾಟನೆಗೆ ಊರಿನ ಜನರ ಕರೆದು ಊಟ ಸಹ ಹಾಕಿಸಿದ್ದಾನೆ.
ಸಮಂತಾ ಬಹಳ ಒಳ್ಳೆಯ ನಟಿ, ಸಮಂತಾ ಕಷ್ಟದಲ್ಲಿರುವ ಹಲವರಿಗೆ ಸಹಾಯ ಸಹ ಮಾಡಿದ್ದಾರೆ. ಹಾಗಾಗಿ ನಾನು ಅವರ ಅಭಿಮಾನಿ. ಅದಕ್ಕಾಗಿಯೇ ಅವರಿಗಾಗಿ ದೇವಾಲಯ ನಿರ್ಮಿಸಿದ್ದೇನೆ, ತಮಿಳು ನಟಿಯರಿಗೆ ದೇವಾಲಯ ನಿರ್ಮಿಸಲಾಗಿದೆ. ಆದರೆ ತೆಲುಗು ನಟಿಯರಿಗೆ ದೇವಾಲಯ ನಿರ್ಮಿಸಿರಲಿಲ್ಲ ಹಾಗಾಗಿ ಈಗ ಸಮಂತಾಗಾಗಿ ದೇವಾಲಯ ನಿರ್ಮಿಸಿದ್ದೇನೆ’ ಎಂದಿದ್ದಾರೆ .ಸಮಂತಾರ ದೇವಾಲಯದ ವಿಡಿಯೋ ಮತ್ತು ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ತಮಿಳು ನಟಿಯರಾದ ಖುಷ್ಬು ಅವರ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಅದಾದ ಬಳಿಕ ತಮಿಳು ನಟಿ ನಮಿತಾಗಾಗಿ ದೇವಾಲಯ ನಿ