ಮುಂಬೈ, ಏ.04 (DaijiworldNews/AA): ಕನ್ನಡದ 'ಬಿಂದಾಸ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಹನ್ಸಿಕಾ ಮೊಟ್ವಾನಿ ಇದೀಗ ನಾದಿನಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ವಂಚನೆ ಆರೋಪ ಮಾಡಿದ್ದಾರೆ.

ಹನ್ಸಿಕಾ ಮೊಟ್ವಾನಿಯ ಸಹೋದರ ಪ್ರಶಾಂತ್ ಮೊಟ್ವಾನಿಯ ಪತ್ನಿ ಮುಸ್ಕಾನ್ ನ್ಯಾನ್ಸಿ ಕಳೆದ ವರ್ಷ ಪತಿ ಪ್ರಶಾಂತ್, ಹನ್ಸಿಕಾ ಹಾಗೂ ಅವರ ಪೋಷಕರ ವಿರುದ್ಧ ದೌರ್ಜನ್ಯ ಮತ್ತು ಹಣಕಾಸು ವಂಚನೆ ಆರೋಪ ಮಾಡಿದ್ದರು. ಮುಸ್ಕಾನ್ ಅವರ ದೂರಿನ ಮೇರೆಗೆ, ಪ್ರಶಾಂತ್, ಹನ್ಸಿಕಾ ಹಾಗೂ ಅವರ ಕುಟುಂಬದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿರುವ ಹನ್ಸಿಕಾ ಮೊಟ್ವಾನಿ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿದ್ದಾರೆ. ಇದರೊಂದಿಗೆ ಮುಸ್ಕಾನ್, ತಮಗೆ 27 ಲಕ್ಷ ರೂಪಾಯಿ ಹಣ ವಂಚಿದ್ದಾರೆಂದು ಆರೋಪಿಸಿದ್ದಾರೆ.
ಮುಸ್ಕಾನ್ ಹಾಗೂ ಪ್ರಶಾಂತ್ ಅವರ ಮದುವೆಗೆ ತಾವು 27 ಲಕ್ಷ ರೂಪಾಯಿ ಹಣ ನೀಡಿದ್ದು, ಆ ಹಣವನ್ನು ಹಿಂತಿರುಗಿಸಿಲ್ಲ. ಅಲ್ಲದೆ, ಮುಸ್ಕಾನ್ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗೂ ತಮಗೂ ಸಂಬಂಧವಿಲ್ಲವೆಂದು ಸಹೋದರ ಹಾಗೂ ಮುಸ್ಕಾನ್ ನಡುವಿನ ವೈವಾಹಿಕ ಕಲಹಗಳಿಗೆ ನಮ್ಮನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಹಾಗಾಗಿ ತಮ್ಮ ವಿರುದ್ಧ ಪ್ರಕರಣವನ್ನು ಕೈಬಿಡಬೇಕೆಂದು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.