ಬೆಂಗಳೂರು, ಏ.04 (DaijiworldNews/AA): ಸದ್ಯ ಸಿನಿಮಾಗಳಿಂದ ಆಗಿ ದೂರ ಸರಿದು ಕುಟುಂಬದೊಂದಿಗೆ ಸಂತಸವಾಗಿರುವ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ನಟಿ ಸಂಜನಾ ಗಲ್ರಾನಿ ಹಾಗೂ ಅಜೀಜ್ ಪಾಷಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ರಂಗದಿಂದ ದೂರ ಸರಿದು ಪತಿ ಅಜೀಜ್ ಪಾಷಾ ಮತ್ತು ಮಗ ಅಲಾರಿಕ್ ಜೊತೆ ನಟಿ ಸಂಜನಾ ಸಂತೋಷವಾಗಿದ್ದಾರೆ. ಸದ್ಯ ತಾವು ಮತ್ತೆ ತಾಯಿಯಾಗುತ್ತಿರುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಸೀಮಂತದ ಫೋಟೋಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳು ಶುಭ ಹಾರೈಸಿದ್ದಾರೆ.
ಹಸಿರು ಸೀರೆಯುಟ್ಟು, ಸೀಮಂತದ ಫೋಟೋಗಳು ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಸಂಜನಾ, 'ಈ ಯುಗಾದಿ ನನಗೆ ತುಂಬಾ ವಿಶೇಷವಾಗಿದೆ ಏಕೆಂದರೆ ನಮ್ಮ ಕುಟುಂಬದ ಹೊಸ ಸದಸ್ಯರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಲು ನಾವು ಕಾಯುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದದಲ್ಲಿ ನನ್ನನ್ನು ಇರಿಸಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.