ಮುಂಬೈ,ಮೇ. 24 (DaijiworldNews/AK): ಆಲಿಯಾ ಭಟ್ ಅವರು 2022ರ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಆಲಿಯಾ ಭಟ್ ಜನ್ಮ ನೀಡಿದರು. ಇದೀಗ ಮತ್ತೆ ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್ ಎನ್ನುವ ಪ್ರಶ್ನೆ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ.

ಆಲಿಯಾ ಭಟ್ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಈ ಸಿನಿಮೋತ್ಸವದಲ್ಲಿ ಆಲಿಯಾ ಮೊದಲ ಬಾರಿಗೆ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರು ಪೋಸ್ ಕೊಡುವಾಗ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣಿಸಿದೆ. ಇದರಿಂದ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಆಲಿಯಾ ಭಟ್ ಅವರು ಮದುವೆ ಆದ ಕೇವಲ ಏಳು ತಿಂಗಳಿಗೆ ಮಗುವಿಗೆ ಜನ್ಮನೀಡಿದರು. ಮದುವೆಗೂ ಮೊದಲೇ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆದರೆ, ಮಗು ಏಳು ತಿಂಗಳಿಗೆ ಜನಿಸಿದೆ ಎಂದು ಕುಟುಂಬದವರು ಹೇಳಿಕೊಂಡರು. ಆ ಬಳಿಕ ಆಲಿಯಾ ಭಟ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಇದೀಗ ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.