ಬೆಂಗಳೂರು , ಮೇ. 26 (DaijiworldNews/AK):ಚೆಲುವಿನ ಚಿತ್ತಾರ’ ಸಿನಿಮಾದ ನಟಿ ಅಮೂಲ್ಯ ಅವರು ಮಕ್ಕಳ ಲಾಲನೆ - ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಈಗ ಕುಟುಂಬದೊಂದಿಗಿರುವ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಪತಿ ಜಗದೀಶ್ ಮತ್ತು ಅವಳಿ ಮಕ್ಕಳೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಈ ಫೋಟೋಶೂಟ್ ನೋಡಿ ಯಾರ ಕೆಟ್ಟ ದೃಷ್ಟಿಯೂ ಈ ಕುಟುಂಬದ ಮೇಲೆ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.