ಬೆಂಗಳೂರು, ಜೂ. 01 (DaijiworldNews/TA): ದ ಡೆವಿಲ್ ಸಿನಿಮಾ ಕೆಲಸ ಎಲ್ಲಿಯವರೆಗೆ ಬಂದಿದೆ ಎಂದು ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಈಗ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿರೋದಾಗಿ ಹೇಳಲಾಗಿದೆ. ಅದಷ್ಟೇ ಅಲ್ಲ, ಸಿಗರೇಟ್ ಹಿಡಿದು ಅಂಬಿ ಸ್ಟೈಲ್ನಲ್ಲಿ ದರ್ಶನ್ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ. ಇದು ಕುತೂಹಲ ಕೆರಳಿಸಿದೆ.

ಅಂತ ಸಿನಿಮಾದಲ್ಲಿ ಕನ್ವರ್ ಲಾಲ್ ಆಗಿ ರೆಬಲ್ ಸ್ಟಾರ್ ಅಂಬರೀಷ್ ಕಾಣಿಸಿಕೊಂಡು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಅದೇ ರೀತಿಯ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿರುವುದು ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.
ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್ ನಿರ್ಮಿಸುತ್ತಿರುವ ‘ದ ಡೆವಿಲ್’ ಚಿತ್ರದಲ್ಲಿ ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ‘ತಾರಕ್ ಡೈರೆಕ್ಟರ್’ ಮಿಲನಾ ಪ್ರಕಾಶ್ ʻದ ಡೆವಿಲ್’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.