ಮುಂಬೈ, ಜೂ. 04 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಒಂದರ ಹಿಂದೊಂದರಂತೆ ಸತತ ಎರಡು ಹಿಟ್ ಹಿಂದಿ ಸಿನಿಮಾಗಳನ್ನು ನೀಡಿದ್ದರು. ಅದರ ಬೆನ್ನಲ್ಲೇ ಸಲ್ಮಾನ್ ಜೊತೆ ನಟಿಸಿದ 'ಸಿಖಂಧರ್' ಸಿನಿಮಾ ಫ್ಲಾಪ್ ಸಿನಿಮಾ ಲಿಸ್ಟ್ ಗೆ ಸೇರಿತ್ತು. ಫ್ಲಾಪ್ ಸಿನಿಮಾ ನೀಡಿದ ಬೆನ್ನಲ್ಲೇ ಇದೀಗ ರಶ್ಮಿಕಾ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ದಿಯಾನಾ ಪೆಂಟಿ ಒಟ್ಟಿಗೆ ನಟಿಸಿರುವ 'ಕಾಕ್ಟೈಲ್' 2012 ರಲ್ಲಿ ಬಿಡುಗಡೆ ಆಗಿತ್ತು. ಆಗ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ 'ಕಾಕ್ಟೇಲ್ 2' ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಸಿನಿಮಾನಲ್ಲಿ ನಾಯಕಿಯಾಗಿ ಅಭಿನಯಿಸಲು ರಶ್ಮಿಕಾಗೆ ಅವಕಾಶ ದೊರೆತಿದೆ.
ಮೊದಲ 'ಕಾಕ್ಟೇಲ್' ರೀತಿಯೇ 'ಕಾಕ್ಟೇಲ್ 2' ಸಿನಿಮಾ ಕೂಡ ತ್ರಿಕೋನ ಪ್ರೇಮಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿರಲಿದೆ. ವಿಶೇಷವೆಂದರೆ ಈ ಸಿನಿಮಾ ಸಹ ಗ್ಲಾಮರಸ್, ಫಾರ್ವರ್ಡ್ ಯುವತಿ, ಸಂಸ್ಕಾರವಂತ ಯುವತಿ ಮತ್ತು ಪ್ಲೇಬಾಯ್ ಹುಡುಗನ ನಡುವೆ ನಡೆಯುವ ಪ್ರೇಮಕತೆಯನ್ನು ಹೊಂದಿರಲಿದೆ.
ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಂಸ್ಕಾರವಂತ ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಕೃತಿ ಸೆನೊನ್ ಮಾಡರ್ನ್ ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕನಾಗಿ ನಟ ಶಾಹಿದ್ ಕಪೂರ್ ನಟಿಸಲಿದ್ದಾರೆ. ಲವ್ ರಂಜನ್ 'ಕಾಕ್ಟೇಲ್ 2' ಸಿನಿಮಾ ನಿರ್ದೇಶಿಸಲಿದ್ದು, ಮ್ಯಾಡ್ಲಾಕ್ನ ವಿಜಯನ್ ಅವರು ಬಂಡವಾಳ ಹೂಡಲಿದ್ದಾರೆ.