ಚೆನ್ನೈಜೂ. 06 (DaijiworldNews/AK): ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ, ನಟ ಅಖಿಲ್ ಅಕ್ಕಿನೇನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಝೈನಾಬ್ ರಾವಡ್ಜಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಮಾರಂಭ ಇಂದು ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

ನಾಗಾರ್ಜುನ ಅವರ ಜ್ಯೂಬ್ಲಿ ಹಿಲ್ಸ್ ನಿವಾಸದಲ್ಲಿಯೇ ಇಂದು ಬೆಳಿಗಿನ ಜಾವ 3 ಗಂಟೆಗೆ ಅಖಿಲ್ ಹಾಗೂ ಝೈನಬ್ ರೌಜಿ ಅವರ ವಿವಾಹ ಕುಟುಂಬ ಸದಸ್ಯರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ.
ಅಕ್ಕಿನೇನಿ ಅಖಿಲ್ ಮತ್ತು ಝೈನಬ್ ರೌಜಿ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಖಿಲ್ ಹಾಗೂ ಝೈನಬ್ ತಾವಿಬ್ಬರೂ ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಇಬ್ಬರ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಆಗಿದ್ದಾರೆ. ಆದರೆ ಇಬ್ಬರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಚಿತ್ರರಂಗದ ಹಲವು ಗಣ್ಯರು, ರಾಜಕಾರಣಿಗಳು ಭಾಗಿ ಆಗಲಿದ್ದಾರೆ.
ಝೈನಬ್ ಖ್ಯಾತ ಉದ್ಯಮ ಕುಟುಂಬವಾದ ರೌಜಿ ಕುಟುಂಬದ ಮಗಳು. ಝೈನಬ್ ಸ್ವತಃ ಉದ್ಯಮಿ ಆಗಿರುವ ಜೊತೆಗೆ ಕಲಾವಿದೆ. ಝೈನಬ್ ಅವರ ತಂದೆ ಜುಲ್ಫಿ ರೌಜಿ ಖ್ಯಾತ ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್ ಉದ್ಯಮಿ.