ಬೆಂಗಳೂರು, ಜು. 03 (DaijiworldNews/AK): ಯಶ್ ನಟಿಸಿ ನಿರ್ಮಿಸುತ್ತಿರುವ ಮಹಾತ್ವಾಕಾಂಕ್ಷೆಯ ಪ್ರಾಜೆಕ್ಟ್ ರಾಮಾಯಣ ಚಿತ್ರದ ಅಫಿಶೀಯಲ್ ಫಸ್ಟ್ ಟೈಟಲ್ ಟೀಸರ್ ರಿಲೀಸ್ ಆಗಿದೆ.

ರಾಮಾಯಣ ಫಸ್ಟ್ ಟೈಟಲ್ ಟೀಸರ್ ಅನ್ನು ರಾಕಿಂಗ್ ಸ್ಟಾರ್ ಯಶ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳು ಒಟ್ಟಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಇದು ಎಂದು ಯಶ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಆರಂಭಕ್ಕೆ ಸ್ವಾಗತ. ರಾಮ v/s ರಾವಣನ ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಯಶ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಟಾಕ್ಸಿಕ್ ಹಾಗೂ ರಾಮಾಯಣ, ಎರಡೂ ಚಿತ್ರಗಳ ನಿರ್ಮಾಣ ಹಾಗೂ ನಟನೆಯಲ್ಲಿ ಯಶ್ ಬ್ಯುಸಿ ಇದ್ದಾರೆ. ಹೀಗಾಗಿ ಟೈಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿ ಇದೀಗ ಅಲ್ಪ ಸಮಯದಲ್ಲಿ ಪ್ರವಾಸಕ್ಕೆಂದು ಯಶ್ ಹೋಗಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆ ಪಾತ್ರದಲ್ಲಿ ಸಾಯಿಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ.