ಮುಂಬೈ, ಜು. 09 (DaijiworldNews/AK): ಬಾಲಿವುಡ್ನ ಅಮೇಜಿಂಗ್ ಆ್ಯಕ್ಟರ್ ಬಾಬಿ ಡಿಯೋಲ್ ಅನಿಮಲ್ ಸಿನಿಮಾ ನಂತರ ಭಾರತೀಯ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಸೌತ್ನ ಬಹುಕೋಟಿ ಬಜೆಟ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗಾಗಿ ಬಾಬಿ ಡಿಯೋಲ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಸಿನಿಮಾದ ಹೊಸ ಪಾತ್ರಕ್ಕಾಗಿ ಬಾಬಿ ಡಿಯೋಲ್ 15 ಕೆಜಿ ತೂಕವನ್ನ ಇಳಿಸಿಕೊಂಡಿದ್ದಾರೆ. ಲಾಂಗ್ ಹೇರ್ಸ್ಟೈಲ್ ಪೆಪ್ಪರ್ ಸಾಲ್ಟ್ ಶೇವ್ ಲುಕ್ನಲ್ಲಿ ಮಸ್ತ್ ಆಗಿ ಕಾಣಿಸಿಕೊಳ್ಳುವ ಬಾಬಿ ಡಿಯೋಲ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅನಿಮಲ್, ಕಂಗುವ ಹಾಗೂ ಹೌಸ್ಫುಲ್-5 ಸಿನಿಮಾಗಳ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.