ಮುಂಬೈ, ಜು. 20 (DaijiworldNews/AA): ಕಿಂಗ್ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಪೆಟ್ಟಾಗಿದೆ. ಚಿಕಿತ್ಸೆ ಪಡೆಯುವ ಸಲುವಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ ಹಾಗೂ ಇಂಗ್ಲೆಂಡ್ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಈ ಸುದ್ದಿ ಸಂಪೂರ್ಣ ವದಂತಿ. ಅವರಿಗೆ ಯಾವುದೇ ಗಾಯ ಆಗಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಶಾರುಖ್ ಖಾನ್ ಅವರು 'ಕಿಂಗ್' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಶಾರುಖ್ ಖಾನ್ ಅವರಿಗೆ ಗಾಯ ಆಗಿಲ್ಲ. ಈ ವಿಷಯ ತಿಳಿದ ಬಳಿಕ ಅವರ ಅಭಿಮಾನಿಗಳಿಗೆ ಸಮಾಧಾನವಾಗಿದೆ.
ಗಾಯ ಆಗಿದ್ದರಿಂದ ಶಾರುಖ್ ಖಾನ್ ಅವರು ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ತೆರಳಿದ್ದಾರೆ ಎಂಬುದು ನಿಜವಲ್ಲ. ವೈಯಕ್ತಿಕ ಕೆಲಸ ಮೇಲೆ ಅವರು ಅಮೆರಿಕಕ್ಕೆ ಹೋಗಿದ್ದಾರೆ. ಜುಲೈ ಎರಡನೇ ವಾರದಲ್ಲಿ ಅವರು ಅಲ್ಲಿಗೆ ತೆರಳಿದ್ದು, ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಮರಳಲಿದ್ದಾರೆ.
ಶಾರುಖ್ ಖಾನ್ ಅವರು ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಅದು ಸತ್ಯವಲ್ಲ. ಬೇರೆ ಕಾರಣದಿಂದ ಅವರು ಮೂಗಿನ ಸರ್ಜರಿಗೆ ಒಳಗಾಗಿದ್ದರು. ಶೂಟಿಂಗ್ ವೇಳೆ ಮೂಗಿಗೆ ಗಾಯ ಆಗಿರಲಿಲ್ಲ. ಈಗ ವಿನಾ ಕಾರಣ ಅವರ ಬಗ್ಗೆ ಗಾಳಿ ಸುದ್ದಿ ಹಬ್ಬಿಸಲಾಗಿದೆ.