ಮುಂಬೈ, ಜು. 21 (DaijiworldNews/AA): ಸಾಮಾನ್ಯವಾಗಿ ನಟ-ನಟಿಯರು ನಟನೆಯೊಂದಿಗೆ ಬ್ಯುಸಿನೆಸ್ ಕೂಡ ನಡೆಸುತ್ತಾರೆ. ಹಾಗೆಯೇ ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಅವರು ಆರಂಭಿಸುತ್ತಿರುವುದು ಪರ್ಫ್ಯೂಮ್ ಬ್ಯುಸಿನೆಸ್ ಅನ್ನೋದು ವಿಶೇಷ.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಬೇಡಿಕೆ ಮುಂದೆ ಯಾವಾಗಲೂ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಬ್ಯುಸಿನೆಸ್ ಶುರು ಮಾಡುತ್ತೇನೆ ಎಂದರೆ ಕಷ್ಟ. ಹೀಗಾಗಿ ಬೇಡಿಕೆಯಲ್ಲಿರುವಾಗಲೇ ನಟಿ ರಶ್ಮಿಕಾ ಮಂದಣ್ಣ ಪರ್ಫ್ಯೂಮ್ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕೆಲವೇ ವರ್ಷಗಳು ಕಳೆಯುವುದರಲ್ಲಿ 60 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಹಣ ಗಳಿಸಿರುವ ಅವರು ಬ್ಯುಸಿನೆಸ್ನಲ್ಲಿ ಪ್ರಾರಂಭಿಸಲು ಮುಂದಾಗಿದ್ದಾರೆ.