ಚೆನ್ನೈ ,ಜು. 26 (DaijiworldNews/AK):ಇದೀಗ ನಟ ವಿಜಯ್ ದೇವರಕೊಂಡ ‘ಕಿಂಗ್ಡಮ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಇದೇ ತಿಂಗಳ 31ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಸಾಕಷ್ಟು ಶ್ರಮವನ್ನು ವಿಜಯ್ ದೇವರಕೊಂಡ ಹಾಕಿದ್ದು, ಶ್ರಮದ ಪ್ರತಿಫಲ ಸಿನಿಮಾ ಬಿಡುಗಡೆಗೆ ಮುನ್ನವೇ ಸಿಗಲಾರಂಭಿಸಿದೆ.

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಬಿಡುಗಡೆಗೆ ಮುಂಚೆಯೇ 50 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ವಿದೇಶ ಬಿಡುಗಡೆ ಹಕ್ಕು, ವಿಶೇಷವಾಗಿ ಉತ್ತರ ಅಮೆರಿಕದ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ. ಭಾರತದಲ್ಲಿಯೂ ಸಹ ಸಿನಿಮಾದ ಬಿಡುಗಡೆ ಹಕ್ಕಿಗೆ ಭರ್ಜರಿ ದರವೇ ನಿಗದಿ ಆಗಿದೆ. ಸಿನಿಮಾದ ಆಡಿಯೋ ಹಕ್ಕುಗಳ ಮಾರಾಟದಿಂದಲೂ ಉತ್ತಮ ಮೊತ್ತವೇ ದೊರಕಿದ್ದು, ಈ ವರೆಗೆ ಸುಮಾರು 50 ಕೋಟಿ ಬ್ಯುಸಿನೆಸ್ ಆಗಿದೆ ಎನ್ನಲಾಗುತ್ತಿದೆ.
‘ಕಿಂಗ್ಡಮ್’ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ ಹೊರತಾಗಿಯೇ ಈ ವರೆಗೆ 50 ಕೋಟಿ ಬ್ಯುಸಿನೆಸ್ ಆಗಿರುವುದು ಬಹಳ ಒಳ್ಳೆಯ ಬೆಳವಣಿಗೆ ಆಗಿದ್ದು, ಸಿನಿಮಾದ ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಬಿಡುಗಡೆಯನ್ನು ಬಲು ಜೋರಾಗಿಯೇ ನಿರ್ಮಾಪಕರು ಮಾಡುತ್ತಿದ್ದು, ಆಂಧ್ರ-ತೆಲಂಗಾಣಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಬಲು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ‘ಕಿಂಗ್ಡಮ್’ ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಒಳಗೊಂಡಿದ್ದು, ಸಿನಿಮಾದ ಟ್ರೈಲರ್ ಇಂದು (ಜುಲೈ 26) ಬಿಡುಗಡೆ ಆಗಲಿದೆ.