ಮುಂಬೈ, ಸೆ. 23 (DaijiworldNews/AA): ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿಗಳು ಕಳೆದ ಕೆಲ ವಾರಗಳಿಂದಲೂ ಹರಿದಾಡುತ್ತಿದ್ದವು. ಇದೀಗ ಈ ಸುದ್ದಿ ನಿಜವಾಗಿದ್ದು, ಸ್ವತಃ ಕತ್ರಿನಾ ಕೈಫ್ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋ ಜೊತೆ ಸ್ಟಾರ್ ದಂಪತಿ "ನಮ್ಮ ಜೀವನದ ಹೊಸ ಅಧ್ಯಾಯವನ್ನು ತುಂಬಿದ ಹೃದಯಗಳೊಂದಿಗೆ ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ" ಎಂದು ಕತ್ರಿನಾ ಕೈಫ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ನಟ ವಿಕ್ಕಿ ಕೌಶಲ್ರನ್ನು ಕತ್ರಿನಾ 2021ರಲ್ಲಿ ಮದುವೆಯಾಗಿದ್ದರು. ಇದೀಗ ಸ್ಟಾರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋಶೂಟ್ನ ಫೋಟೋವನ್ನ ಕೈಯಲ್ಲಿ ಹಿಡಿದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಕತ್ರಿನಾ ಅವರ ಇನ್ಸ್ಟಾಗ್ರಾಂ ಪೋಸ್ಟ್ಗೆ ನಟಿ ಮೃಣಾಲ್ ಠಾಕೂರ್, ನೇಹಾ ದೂಪಿಯಾ, ಹರ್ಷಿಕಾ ಪೂಣಚ್ಚ, ಸೋನಂ ಕಪೂರ್, ರಕುಲ್ ಪ್ರೀತ್ ಸಿಂಗ್, ಜಾನ್ಹವಿ ಕಪೂರ್ ಇನ್ನೂ ಹಲವಾರು ಸೆಲೆಬ್ರಿಟಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.