ಬೆಂಗಳೂರು, ಸೆ. 26(DaijiworldNews/TA): ಕಾಂತಾರ ಚಿತ್ರದ ಮೂಲಕ ಕರಾವಳಿ ಸಹಿತ ರಾಜ್ಯಾದ್ಯಂತ ಚಿತ್ರ ಪ್ರೇಮಿಗಳ ಮನಸೂರೆಗೊಂಡು ಇದೀಗ ಹೊಂಬಾಳೆ ಪ್ರೊಡಕ್ಷನ್ನ ಕಾಂತಾರ-1 ಬಿಡುಗಡೆಗೆ ಸಜ್ಜುಗೊಂಡಿದ್ದು, ಆ. 2ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಇದರ ಆಫೀಶಿಯಲ್ ಜುವೆಲರಿ ಪಾರ್ಟನರ್ ಆಗಿ 'ಬೆಂಗಳೂರಿನ ಆಭರಣ ಟೈಮ್ಲೆಸ್ ಜುವೆಲರಿ' ಸಹಕರಿಸಿದೆ.

ಆಭರಣ ಟೈಮ್ ಲೆಸ್ ಜುವೆಲರಿಯಲ್ಲಿ ತಯಾರಿಸಲಾದ ಪ್ರತಿಯೊಂದು ಆಭರಣ ಕಾಂತರ ನಾಣ್ಯವು ಕಾಂತಾರದ ಶ್ರೀಮಂತ ಸಾಂಸ್ಕೃತಿಕ ವೈಭವಕ್ಕೆ ನೀಡಿದ ಗೌರವವಾಗಿದೆ. ನಾಣ್ಯದ ಒಂದು ಭಾಗದಲ್ಲಿ ಕಾಂತಾರ ಚಿತ್ರದ ಥೀಮ್ ಆಗಿದ್ದರೆ ಹಾಗೂ ಇನ್ನೊಂದು ಭಾಗದಲ್ಲಿ ಪರಿಶುದ್ಧ ಪರಂಪರೆಯ 'ಬೆಂಗಳೂರಿನ ಆಭರಣ ಟೈಮ್ ಲೆಸ್ ಜುವೆಲರಿಯ ಮುದ್ರೆ ಹೊಂದಿದೆ. ಚಿನ್ನ ಮತ್ತು ಬೆಳ್ಳಿ ಎರಡರಲ್ಲೂರಚಿಸಲಾದ ಈ ಸೀಮಿತ ಆವೃತ್ತಿಯ ನಾಣ್ಯಗಳು ಬಹು ಆಕರ್ಷಕವಾಗಿವೆ. ಇದು ಜಾನಪದ, ಕಲಾತ್ಮಕತೆ ಮತ್ತು ಕಾಲಾತೀತ ಕಥೆಯನ್ನು ಸಾರುವ ಸಂಕೇತವಾಗಿಯೂ ರೂಪುಗೊಂಡಿದೆ.
ಬೆಂಗಳೂರಿನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಪಕ ವಿಜಯ ಕಿರಗಂದೂರು, ನಟಿ ರುಕ್ಷಿಣಿ ವಸಂತ್, ಪ್ರಗತಿ ರಿಸನ್ ಶೆಟ್ಟಿ ಬೆಂಗಳೂರಿನ ಆಭರಣ ಟೈಮ್ ಬೆನ್ ಜುವೆಲರಿಯ ಎಂಡಿ ಪ್ರತಾಪ್ ಮಧುಕರ ಕಾಮತ್, ನಿರ್ದೇಶಕರಾದ ಪ್ರೀತಿ ಪ್ರತಾಪ್ ಕಾಮತ್, ಸಂಯುಕ್ತಾ ಪ್ರತಾವ ಕರ್ಮ ಉಪಸ್ಥಿತರಿದ್ದರು.
ಕಾಂತಾರ' ನಾಣ್ಯ ಬಿಡುಗಡೆ : ಅಪರೂಪದ ಸಂಗ್ರಹ ಯೋಗ್ಯವಾದ ಚಿನ್ನ ಮತ್ತು ಬೆಳ್ಳಿಯ 'ಕಾಂತಾರ' ನಾಣ್ಯಗಳನ್ನು ಚಿತ್ರದ ಟೈಲರ್ ಬಿಡುಗಡೆ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಚಿನ್ನ ಹಾಗೂ ಬೆಳ್ಳಿಯ ಬಲು ಅಪರೂಪದ ಆಕರ್ಷಕ ನಾಣ್ಯಗಳು ಪಾರಂಪರಿಕ 3 ಹೆಗ್ಗುರುತಿನ ಶೋರೂಂಗಳಾದ ಬೆಂಗಳೂರಿನ ಎಂ.ಜಿ. ರಸ್ತೆ, ರಾಜಾಜಿನಗರ ಮತ್ತು ಜೆ.ಪಿ.ನಗರದಲ್ಲಿರುವ ಮೂರೂ ಶೋರೂಮ್ಗಳಲ್ಲಿ ಲಭ್ಯವಿರಲಿದೆ.