ಮುಂಬೈ,ಅ. 07 (DaijiworldNews/AK): ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ, ನಟಿ ಸೋನಂ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2022ರಲ್ಲಿ ಗಂಡು ಮುಗುವಿಗೆ ಜನ್ಮ ನೀಡಿದ್ದ ಸೋನಂ ಈಗ ಮತ್ತೆ ಗರ್ಭಿಣಿಯಾಗಿದ್ದಾರೆ. ಮೊದಲ ಮಗು ವಾಯು ಜನಿಸಿದ ಬಳಿಕ ಸಿನಿಮಾದಲ್ಲಿ ನಟಿಸುವುದನ್ನ ಕಡಿಮೆ ಮಾಡಿದ್ದ ಸೋನಂ ಮಾಡೆಲಿಂಗ್ ಕ್ಷೇತ್ರದಲ್ಲೇ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.
ಗರ್ಭಿಣಿಯಾದ ಬಳಿಕ ಸೋನಂ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫೋಟೋಗಳನ್ನ ಪೋಸ್ಟ್ ಮಾಡುವ ವೇಳೆ ಹೊಟ್ಟೆಯನ್ನ ಹೈಡ್ ಮಾಡುತ್ತಿದ್ದಾರೆ. ಹೀಗಾಗಿ ಸೋನಂ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ. ಸೋನಂ ಕಪೂರ್ 2018 ರಲ್ಲಿ ಉದ್ಯಮಿ ಆನಂದ್ ಅಹೂಜಾರನ್ನ ಮದುವೆಯಾಗಿದ್ದರು. ಶೀಘ್ರವೇ ಗರ್ಭಿಣಿ ಬಗ್ಗೆ ಸೋನಂ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.