ಬೆಂಗಳೂರು, ಅ. 11 (DaijiworldNews/AA): ಸ್ಯಾಂಡಲ್ವುಡ್ನ ಹಿರಿಯ ನಟ ಉಮೇಶ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರಿಗೆ ಕಾಯಿಲೆ 4ನೇ ಸ್ಟೇಜ್ನಲ್ಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹಿರಿಯ ನಟ ಎಂ.ಎಸ್ ಉಮೇಶ್ ಅವರು ಅ.10ರಂದು ಮನೆಯಲ್ಲಿ ಬಿದ್ದು ಕಾಲು ಹಾಗೂ ಭುಜಕ್ಕೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಎಂಆರ್ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಅವರಿಗೆ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಗಿದೆ.
"ಸದ್ಯ ವೈದ್ಯರ ಪರೀಕ್ಷೆ ಪ್ರಕಾರ ಲಿವರ್ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಸ್ಪ್ರೆಡ್ ಆಗಿದೆ. ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣಿಸಿದ್ದಾರೆ. ಆದರೆ, ಕ್ಯಾನ್ಸರ್ ಇದೆ. ಇದನ್ನು ಖಚಿತಪಡಿಸಲು ಕೆಲವು ಟೆಸ್ಟ್ ಮಾಡಬೇಕಿದೆ. ಲಿವರ್ ಒಳಗೆ ಇರೋ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ" ಎಂದು ವೈದ್ಯರು ತಿಳಿಸಿದ್ದಾರೆ.
"ಕಿಮೋಥೆರಪಿ, ಇಮಿನೋಥೆರಪಿ ಮಾಡಬೇಕಾಗಿದೆ. ಕ್ಯಾನ್ಸರ್ ಸ್ಪೆಶಲಿಸ್ಟ್ ಬಂದಿದ್ದಾರೆ. ಇಂಜೆಕ್ಷನ್ ಅಲ್ಲಿ ಗಡ್ಡೆ ಕರಗಿಸೋ ಪ್ರಯತ್ನ ನಡೆಯುತ್ತಿದೆ. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ರಿಕವರಿ ಆಗುವ ಚಾನ್ಸ್ ಇದೆ. ಕ್ಯಾನ್ಸರ್ ಗೆ ಚಿಕಿತ್ಸೆ ಆದ ಬಳಿಕ ಮೂಳೆ ಸರ್ಜರಿ ಮಾಡಲು ಸಾಧ್ಯ" ಎಂದು ವೈದ್ಯರು ಹೇಳಿದ್ದಾರೆ.