ಮುಂಬೈ, ಅ. 23 (DaijiworldNews/ TA): ಡಾ. ರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ ತನ್ನದೇ ಛಾಪು ಮೂಡಿಸಿ ಮರೆಯಾದರೂ ಮರೆಯಲಾರದ ನಟಸಾರ್ವಭೌಮ. ಕರುನಾಡ ಅಭಿಮಾನಿಗಳು ಅಣ್ಣಾವ್ರು ಎಂದು ಪ್ರೀತಿಯಿಂದ ಕರೆಯೋ ಮೇರುನಟನನ್ನು ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಹೊಗಳಿದ್ದಾರೆ. ಅವರ ಆಶೀರ್ವಾದ ಪಡೆದ ನಾನೇ ಧನ್ಯ ಎಂಬುವುದಾಗಿ ಹೇಳಿದ್ದಾರೆ.

ಹೌದು ಇದೀಗ ಗಲ್ಲಾ ಪಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಒನ್ ಆಂಡ್ ಓನ್ಲಿ ವಿಚಾರ ಅಂದ್ರೆ ಕಾಂತಾರ ಚಾಪ್ಟರ್೧ . ಕಾಂತಾರ ಸಕ್ಸಸ್ ನಂತರ ರಿಷಭ್ ಶೆಟ್ಟಿ ಬಾಲಿವುಡ್ ಶೋ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ವೇಳೆ ಅಮಿತಾಬ್ ರಿಷಬ್ ಜೊತೆಗೆ ಮಾತುಕತೆ ನಡೆಸುವಾಗ ಡಾ.ರಾಜ್ಕುಮಾರ್ ಅವರನ್ನು ನೆನೆದು ಅವರ ಆಶೀರ್ವಾದ ಪಡೆದ ನಾನೇ ಧನ್ಯ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ರಾಜ್ಕುಮಾರ್ ದೇವರು ಇದ್ದ ಹಾಗೆ. ಅವರು ಸಿಂಪಲ್ ವ್ಯಕ್ತಿಯಾಗಿದ್ದು ಸಾಧಾರಣ ಬಟ್ಟೆ ಧರಿಸುತ್ತಿದ್ದರು. ಸಾಧಾರಣ ಮನೆಯಲ್ಲಿ ವಾಸವಾಗುತ್ತಿದ್ದರು. ಅವರ ಜೀವನ ಶೈಲಿ ನೋಡಿದರು ಅವರು ಇಷ್ಟು ದೊಡ್ಡ ನಟ, ಇಷ್ಟೆಲ್ಲ ಹೆಸರು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ನಾವು ಬೆಂಗಳೂರಿಗೆ ಹೋದಾಗ ಅವರ ಆಶೀರ್ವಾದ ಪಡೆಯುತ್ತಿದ್ದೆವು. ರಾಜ್ಕುಮಾರ್ ಅಂತಹ ನಟನರಿಂದ ಆಶೀರ್ವಾದ ಪಡೆದ ನಾವೇ ಧನ್ಯ’ ಎಂಬುವುದಾಗಿ ಅಮಿತಾಭ್ ಕರುನಾಡಿನ ಹೆಮ್ಮೆಯ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.