ಬೆಂಗಳೂರು, ಅ. 24 (DaijiworldNews/ AK): ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು 2ನೇ ಮದುವೆ ಆಗಿದ್ದಾರೆ. ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ.

ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಇತ್ತೀಚೆಗಷ್ಟೇ ಸುದ್ದಿ ಹೊರಬಿದ್ದಿತ್ತು. ಆ ಬಗ್ಗೆ ಮಾಧ್ಯಮವೊಂದಕ್ಕೆ ರಘು ದೀಕ್ಷಿತ್ ಅವರು ಪ್ರತಿಕ್ರಿಯೆ ಕೂಡ ನೀಡಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಈ ಜೋಡಿಗೆ ಅಭಿನಂದನೆ ತಿಳಿಸಲಾಗಿದೆ.
ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯಕಿಯಾಗಿ, ಕೊಳಲು ವಾದಕಿಯಾಗಿ ವಾರಿಜಶ್ರೀ ಅವರು ಖ್ಯಾತಿ ಗಳಿಸಿದ್ದಾರೆ. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಪರಿಚಯದಿಂದ ಪ್ರೀತಿ ಬೆಳೆದು, ಕುಟುಂಬದ ಒಪ್ಪಿಗೆ ಪಡೆದು ಅವರಿಬ್ಬರು ದಾಂಪತ್ಯ ಜೀವನ ಕಾಲಿಟ್ಟಿದ್ದಾರೆ. ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ರಘು ದೀಕ್ಷಿತ್-ವಾರಿಜಶ್ರೀ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ.