ಮುಂಬೈ, ಜ. 07 (DaijiworldNews/AA): ಬಾಲಿವುಡ್ ಸ್ಟಾರ್ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ತಮ್ಮ ಮಗನಿಗೆ 'ವಿಹಾನ್' ಎಂದು ನಾಮಕರಣ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪುತ್ರನ ಹೆಸರು ರಿವೀಲ್ ಮಾಡಿರುವ ಸ್ಟಾರ್ ದಂಪತಿ, ಮಗನ ಕೈ ಫೋಟೋವನ್ನಷ್ಟೇ ತೋರಿಸಿ ಹೆಸರನ್ನ ಬಹಿರಂಗಪಡಿಸಿದ್ದಾರೆ. ಮಗನಿಗೆ 'ವಿಹಾನ್' ಎಂದು ಹೆಸರಿಟ್ಟಿರುವ ಕತ್ರೀನಾ ಕೈಫ್ - ವಿಕ್ಕಿ ಕೌಶಲ್ ಇದುವರೆಗೂ ಮಗನ ಫೋಟೋವನ್ನ ರಿವೀಲ್ ಮಾಡಿರಲಿಲ್ಲ.
ಕತ್ರೀನಾಗೆ ಕಳೆದ ನವೆಂಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗನ ಹೆಸರನ್ನ ರಿವೀಲ್ ಮಾಡಿರುವ ಕತ್ರೀನಾ, ವಿಹಾನ್ ಹೆಸರು ಹಾಗೂ ಹೆಸರಿನ ಅರ್ಥ ಬೆಳಕಿನ ಕಿರಣ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.