ಚೆನ್ನೈ, ಜ. 08 (DaijiworldNews/AA): ತಮಿಳು ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ 'ಜನ ನಾಯಗನ್'ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಇದೀಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.

ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಾಡಿಸಲು 'ಕೆವಿಎನ್' ಸಂಸ್ಥೆ ಡಿಸೆಂಬರ್ 18ರಂದೇ ಸಿನಿಮಾ ಸಲ್ಲಿಸಿತ್ತು. ಸಿನಿಮಾ ನೋಡಿದ ಮಂಡಳಿ 27 ಕಡೆ ಬದಲವಾಣೆ/ಕಟ್ಗೆ ಸೂಚನೆ ನೀಡಿತ್ತು. ಇದನ್ನು ಸಿನಿಮಾ ಪಾಲಿಸಿತ್ತು. ಬಳಿಕ ಸಿನಿಮಾವನ್ನ ಮರು ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಮಂಡಳಿ ಒಪ್ಪದೆ, ವಿಶೇಷ ಮಂಡಳಿಗೆ ಸಿನಿಮಾ ವೀಕ್ಷಿಸಲು ಶಿಫಾರಸು ಮಾಡಲು ಸೂಚನೆ ನೀಡಿತ್ತು.
ಇನ್ನು ಸೆನ್ಸಾರ್ ಮಂಡಳಿಯಿಂದ ಸರಿಯಾದ ರೆಸ್ಪಾನ್ಸ್ ಇಲ್ಲ ಆರೋಪವನ್ನೂ ತಂಡ ಮಾಡಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ತಂಡ ಆಕ್ರೋಶ ಹೊರಹಾಕಿತ್ತು. ಇದೀಗ ಈ ವಿಚಾರವಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.
ಚಿತ್ರ ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ಕ್ಕೆ ತೀರ್ಪು ನೀಡುವ ಸಾಧ್ಯತೆಯಿದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಈ ಬಗ್ಗೆ ಕೆವಿಎನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದೆ. ಒಂದು ವೇಳೆ ಎಲ್ಲವೂ ಕ್ಲಿಯರ್ ಆದರೆ, ಜನವರಿ 14ರಂದೇ ಸಿನಿಮಾ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಿದೆ.