ಬೆಂಗಳೂರು,23 (DaijiworldNews/AK): ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ಅವರು ಇಂದು (ಜನವರಿ 23) ವಿವಾಹ ಆಗಿದ್ದಾರೆ.ಸಂಧ್ಯಾ ಹೆಸರಿನ ಹುಡುಗಿ ಜೊತೆ ಅವರು ಹಸೆಮಣೆ ಏರಿದ್ದಾರೆ. ಧರ್ಮಸ್ಥಳದಲ್ಲಿ ಸರಳ ವಿವಾಹ ಆಗಲು ಮಂಜು ನಿರ್ಧರಿಸಿದ್ದರು. ಅದೇ ರೀತಿ ಈ ಮದುವೆ ನಡೆದಿದೆ.

ಆಪ್ತರು, ಗೆಳೆಯರು ಈ ಮದುವೆಗೆ ಆಗಮಿಸಿದ್ದು, ಎಲ್ಲರೂ ಮಂಜುಗೆ ಶುಭಾಶಯ ಕೋರಿದ್ದಾರೆ.