ದುಬೈ, ಮಾ. 04 (DaijiworldNews/AA): ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಯೋ ಯೋ ಹನಿ ಸಿಂಗ್ ಹೇಳಿದ್ದಾರೆ.

ಇಸ್ರೇಲ್ ಮತ್ತು ಇರಾನ್ ಸಂಘರ್ಷದಲ್ಲಿ ಅಬುಧಾಬಿ, ದುಬೈ, ಕತಾರ್ ಮತ್ತು ಕುವೈತ್ನಲ್ಲಿ ಸ್ಫೋಟ ಸಂಭವಿಸುತ್ತಿದ್ದು, ಈ ಮಧ್ಯೆ ಹನಿ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಜೊತೆಗೆ ತಾವು ಸೇಫ್ ಇರುವುದಾಗಿ ತಿಳಿಸಿದ್ದಾರೆ.
ದುಬೈ ನಗರ ಸುರಕ್ಷಿತವಾಗಿ, ಶಾಂತವಾಗಿದೆ. ಆನ್ಲೈನ್ನಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಸೇಫ್ ಆಗಿದ್ದೀನಿ ಎಂಬ ಪೋಸ್ಟ್ ಶೇರ್ ಮಾಡಿದ್ದಾರೆ.