ಚೆನ್ನೈ, ಮಾ. 11 (DaijiworldNews/AA): ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ ಎಂದು ನಟಿ ತ್ರಿಷಾ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ನಟ ವಿಜಯ್ ಅವರಿಗೆ ವಿಚ್ಛೇದನ ಕೊಡಲು ಪತ್ನಿ ಸಂಗೀತಾ ರೆಡಿ ಆಗಿದ್ದಾರೆ. ಪತಿ ವಿಜಯ್ಗೆ ಅಕ್ರಮ ಸಂಬಂಧ ಇದೆ ಎಂದು ವಿಜಯ್ ವಿರುದ್ಧ ಸಂಗೀತ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಮಧ್ಯೆ ತ್ರಿಷಾ ಅವರು ಈ ಮೊದಲು ವಿವಾಹದ ಬಗ್ಗೆ ಮಾತನಾಡಿರುವ ಹಳೆಯ ಹೇಳಿಕೆ ವೈರಲ್ ಆಗಿದೆ.
"ನಾನು ವಿಚ್ಛೇದನದಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ, ನಾನು ಜೀವನ ಮಾಡಬೇಕಾದ ವ್ಯಕ್ತಿ ಇವರೇ ಎಂದು ಫೀಲ್ ಆಗಬೇಕು. ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ" ಎಂದು ತಿಳಿಸಿದ್ದರು.
"ನನಗೆ ವಿಚ್ಛೇದನದಲ್ಲಿ ನಂಬಿಕೆ ಇಲ್ಲ. ಮದುವೆಗೂ ಮುನ್ನ 100 ಬಾರಿ ಯೋಚಿಸುತ್ತೇನೆ. ಬೇರೆಯವರಿಗೆ ನೋವುಂಟು ಮಾಡಲು ಅಥವಾ ಅತೃಪ್ತ ಜೀವನ ನಡೆಸಲು ನಾನು ಬಯಸುವುದಿಲ್ಲ" ಎಂದಿದ್ದರು.
"ನನ್ನ ಸುತ್ತಲಿರೋ ಅನೇಕರು ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ತುಂಬಾ ಅತೃಪ್ತರು. ನಾನು ಅಂತಹ ದಾಂಪತ್ಯದಲ್ಲಿರಲು ಬಯಸುವುದಿಲ್ಲ. ನಾನು ಪ್ರೀತಿಯಲ್ಲಿ ಬೀಳಲು ಬಯಸುತ್ತೇನೆ. ನಾನು ಅದರ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದೇನೆ. ಹೀಗಾಗಿ, ಮದುವೆಗೂ ಮೊದಲು ನಾನು ಯೋಚಿಸುತ್ತೇನೆ" ಎಂದು ಹೇಳಿದ್ದರು.