ಮುಂಬೈ, ಮಾ. 16 (DaijiworldNews/AK):ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ರಿಲೀಸ್ಗೂ ಮುನ್ನವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಬಿಡುಗಡೆಗೂ ಮುನ್ನ ಸಿನಿಮಾ 100 ಕೋಟಿ ರೂ. ಸೇರಿದೆ.

‘ಧುರಂಧರ್’ ಚಿತ್ರದ ಮೂಲಕ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿದ್ದ ರಣವೀರ್ ಸಿಂಗ್ ಈಗ ‘ಧುರಂಧರ್ 2: ದಿ ರಿವೆಂಜ್’ ಮೂಲಕ ಮತ್ತೆ ಪ್ರೇಕ್ಷಕರನ್ನು ಮೆಚ್ಚಿಸಲು ಸಜ್ಜಾಗಿದ್ದಾರೆ.
ಆದಿತ್ಯ ಧಾರ್ ನಿರ್ದೇಶನದ ಈ ಬಹು ನಿರೀಕ್ಷಿತ ಪಾರ್ಟ್ 2 ಇದೇ ಮಾ.19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾ.18 ರಂದು ಪ್ರೀಮಿಯರ್ ಶೋ ನಿಗದಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಮುಂಗಡ ಬುಕಿಂಗ್ಗಳು ಪ್ರಾರಂಭವಾದವು. ಚಿತ್ರವು ಈಗಾಗಲೇ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್ಗಳಲ್ಲಿ ಒಂದನ್ನು ತಲುಪಿಸುವ ಹಾದಿಯಲ್ಲಿದೆ.