ಮುಂಬೈ, ಮಾ. 27 (DaijiworldNews/AA): 'ಧುರಂಧರ್ 2' ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ. ಪಾಕಿಸ್ತಾನದಲ್ಲಿ 'ಧುರಂಧರ್ 2' ಸಿನಿಮಾ ಬಿಡುಗಡೆ ಆಗಿಲ್ಲ. ಆದರೂ ಅಲ್ಲಿನ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದು, ಪಾಕ್ ಯುವಕನೊಬ್ಬ 500 ಕೋಟಿ ರೂಪಾಯಿ ಬೇಕು ಎಂದು ಕೇಳಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಲಿಯಾರಿ ನಗರದ ಕೆಲವು ಯುವಕರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. "ಧುರಂಧರ್ 2 ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದರೆ ಲಿಯಾರಿ ಜನರಿಗೆ 500 ಕೋಟಿ ರೂಪಾಯಿ ನೀಡಿ. ಅರ್ಧ ಕಲೆಕ್ಷನ್ ಆದಿತ್ಯ ಧರ್ ಇಟ್ಟುಕೊಳ್ಳಲಿ. ಅವರು ನಮಗೆ ಕೊಡುವ ಹಣದಲ್ಲಿ ನಮ್ಮ ರಸ್ತೆ ನಿರ್ಮಾಣ ಆಗಲಿ" ಲಿಯಾರಿ ಯುವಕ ಹೇಳಿದ್ದಾನೆ.
'ಲಿಯಾರಿಗೆ 2 ಅಥವಾ 3 ಕೋಟಿ ರೂಪಾಯಿ ಸಿಗಬೇಕು. ಇಲ್ಲಿನ ರಸ್ತೆ ಸರಿ ಮಾಡಲು ಹಣ ಬೇಕು' ಎಂದು ಲಿಯಾರಿ ಯುವಕ ಹೇಳಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.