ಮುಂಬೈ, ಏ. 18 (DaijiworldNews/AA): ಹನ್ಸಿಕಾ ಮೋಟ್ವಾನಿ ಹಾಗೂ ಸೋಹೈಲ್ ಕತುರಿಯಾ ಅವರು ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ ಮದುವೆಯಾದ ನಾಲ್ಕೇ ವರ್ಷಕ್ಕೆ ಈ ದಂಪತಿ ಡಿವೋರ್ಸ್ ಪಡೆದಿದ್ದಾರೆ. ಇದೀಗ ಮೊದಲ ಬಾರಿಗೆ ನಟಿ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ.

"ಜನರು ಕ್ಲಿಕ್ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅವರಿಗೆ ಹೆಡ್ಲೈನ್ ಬೇಕಿತ್ತು ಅದು ಅವರಿಗೆ ಸಿಕ್ಕಿತು. ನನಗೆ ಇದೆಲ್ಲ ಮುಖ್ಯ ಎಂದು ಅನಿಸಲಿಲ್ಲ. ಹೀಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಯಾರಾದರೂ ಗೊತ್ತಿಲ್ಲದೆ ತಪ್ಪಾದ ರೈಲನ್ನು ಏರಿದರೆ, ಅದರಲ್ಲಿ ಪ್ರಯಾಣ ಮಾಡಿ ಕೊರಗುವುದಕ್ಕಿಂತ, ರೈಲಿನಿಂದ ಇಳಿಯುವುದು ಉತ್ತಮ. ನನಗೆ ನನ್ನ ಕುಟುಂಬದಿಂದ ಅಪಾರ ಬೆಂಬಲ ಸಿಕ್ಕಿದೆ. ನನಗೆ ಡಿವೋರ್ಸ್ ಬಗ್ಗೆ ಯಾವುದೇ ವಿಷಯ ಇಲ್ಲ. ನಾನು ಖುಷಿಯಾಗಿದ್ದೇನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
'ನಾನು ಅನುಭವಿಸಿದ ಕಷ್ಟಗಳನ್ನು ಕುಟುಂಬದವರು ನೋಡಿದ್ದರು. ಸರಿ ಹೊಂದುತ್ತಿಲ್ಲ ಎಂದರೆ ಹೊರಬರುವಂತೆ ಸೂಚಿಸಿದರು. ನಾನು ಸದಾ ಖುಷಿಯಿಂದ ಇರುವ ವ್ತಕ್ತಿ. ಹೀಗಾಗಿ, ಈ ರೀತಿಯ ಕಷ್ಟ ಅನುಭವಿಸುವುದು ಭಯ ತರುತ್ತದೆ. ನನ್ನ ಹಾಗೂ ಸೋಹೈಲ್ ಮಧ್ಯೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ತಿಳಿಯದಿರುವುದೇ ಉತ್ತಮ' ಎಂದು ಅವರು ಹೇಳಿದ್ದಾರೆ.