ಮುಂಬೈ, ಏ. 22 (DaijiworldNews/AA): ಇತ್ತೀಚಿಗಷ್ಟೇ ಮದುವೆಯಾಗಿದ್ದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಭೋಸ್ಲೆ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಆಕೆಯ ಪತಿ ಫರ್ಮಾನ್ ಖಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೊನಾಲಿಸಾ ಭೋಸ್ಲೆ ಮಾರ್ಚ್ 11ರಂದು ಕೇರಳದ ಪೂವಾರ್ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಪ್ರಿಯಕರ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಅದಾದ ಬಳಿಕ ಲವ್ ಜಿಹಾದ್, ಅವರ ವಯಸ್ಸು ಸೇರಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದವು. ಈ ಬಗ್ಗೆ ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ನಡೆಯುತ್ತಿತ್ತು.
ಬಳಿಕ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೋಕ್ಸೋ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ.
ಈ ಸಂಬಂಧ ಹೇಳಿಕೆ ದಾಖಲಿಸಲು ಪೊಲೀಸರ ಮುಂದೆ ಮೊನಾಲಿಸಾ ಹಾಜರಾಗುವ ನಿರೀಕ್ಷೆಯಿದೆ. ಆದರೆ ಗರ್ಭಿಣಿಯಾಗಿರುವ ಕಾರಣ ಪ್ರಯಾಣಿಸಲು ಅಥವಾ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಫರ್ಮಾನ್ ಖಾನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಪೊಲೀಸರು ವೈದ್ಯಕೀಯ ದೃಢೀಕರಣ ಪಡೆಯುವ ಸಾಧ್ಯತೆಯಿದೆ. ಕೇರಳ ಹೈಕೋರ್ಟ್ ದಂಪತಿಗೆ ಮಧ್ಯಂತರ ತಡೆ ನೀಡಿದ್ದು, ಮೇ.20ರವರೆಗೆ ಫರ್ಮಾನ್ ಖಾನ್ ಬಂಧನಕ್ಕೆ ತಡೆ ನೀಡಿದೆ.