ಮುಂಬೈ, ಜೂ. 09 (DaijiworldNews/AA): ನಾನು ಸಿನಿಮಾ ತೊರೆದಿಲ್ಲ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರ ಹರ್ಷ್ವರ್ಧನ್ ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅಭಿಮಾನಿಯೊಬ್ಬರು ಹರ್ಷ್ವರ್ಧನ್ ಅವರ 'ಥಾರ್ ಸಿನಿಮಾ ಪೋಸ್ಟರ್ ಹಂಚಿಕೊಂಡು "ಹರ್ಷ್ವರ್ಧನ್ ಆ್ಯಕ್ಟರ್ ನೀವು ಸಿನಿಮಾ ಲೋಕ ತೊರೆಯಬಾರದಾಗಿತ್ತು' ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಹರ್ಷ್ವರ್ಧನ್ ಅವರು "ಉತ್ತಮ ಸಿನಿಮಾಗಳನ್ನು ಮಾಡಲು ಸಮಯ ಹಿಡಿಯುತ್ತದೆ. ನಾನು ಯಾವತ್ತೂ ಸಿನಿಮಾ ಇಂಡಸ್ಟ್ರಿ ತೊರೆದಿಲ್ಲ. ಥಾರ್ ಮಾಡಲು ಐದು ವರ್ಷ ಬೇಕಾಯಿತು. ಮುಂದಿನ ಪ್ರಾಜೆಕ್ಟ್ ಸಮಯ ತೆಗೆದುಕೊಳ್ಳುತ್ತದೆ" ಎಂದು ಉತ್ತರಿಸಿದ್ದಾರೆ.
2022ರಲ್ಲಿ ಹರ್ಷ್ವರ್ಧನ್ ಅವರ 'ಥಾರ್' ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿತ್ತು. ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಹೀಗಾಗಿ ಅವರು ಇಂಡಸ್ಟ್ರಿ ತೊರೆದರು ಎಂದೇ ಹೇಳಲಾಗುತ್ತಿತ್ತು. ಆದರೀಗ ಹರ್ಷ್ ತಾವು ಇಂಡಸ್ಟ್ರಿ ತೊರೆದಿಲ್ಲ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.