ಮುಂಬೈ, ಜೂ. 14 (DaijiworldNews/AA): ಇತ್ತೀಚೆಗೆ ಮುಕ್ತಾಯವಾದ 2026ರ ಐಪಿಎಲ್ ಫೈನಲ್ ವೇಳೆ ನಟಿ ಅನುಷ್ಕಾ ಶರ್ಮಾ ತುಳಸಿ ಕಂಠಿ ಮಾಲೆಯನ್ನು ಧರಿಸಿದ್ದರು. ಇದೀಗ ಈ ಮಾಲೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅದರ ಬೇಡಿಕೆ ಹೆಚ್ಚಾಗಿದೆ.

ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯದ ವೇಳೆ ನಟಿ ಅನುಷ್ಕಾ ಶರ್ಮಾ ಧರಿಸಿದ್ದ ತುಳಸಿ ಕಂಠಿ ಮಾಲೆ ಎಲ್ಲರ ಗಮನ ಸೆಳೆದಿತ್ತು. ಈ ಮಾಲೆ ವೈರಲ್ ಆದ ಬೆನ್ನಲ್ಲೇ ಹಲವು ಬ್ರ್ಯಾಂಡ್ಗಳ ತುಳಸಿ ಮಾಲೆಗಳಿಗೆ ಆನ್ಲೈನ್ನಲ್ಲಿ ಬೇಡಿಕೆ ಹೆಚ್ಚಿದೆ.
ಕಳೆದ ಕೆಲವು ವಾರಗಳಲ್ಲಿ ತುಳಸಿ ಮಾಲೆಗಳ ಮಾರಾಟದಲ್ಲಿ ಶೇ.10 ರಿಂದ 15ರಷ್ಟು ಏರಿಕೆ ಕಂಡುಬಂದಿದೆ. ಹಲವರು ಅನುಷ್ಕಾ ಧರಿಸಿದ್ದ ಅದೇ ಮಾಲೆ ಬೇಕೆಂದು ಕೇಳುತ್ತಿರುವುದಾಗಿ ಇನ್ಸ್ಟಾಗ್ರಾಂ ಸ್ಟೋರ್ ಸಂಸ್ಥಾಪಕರೊಬ್ಬರು ತಿಳಿಸಿದ್ದಾರೆ.