ಬೆಂಗಳೂರು,ಜೂ. 18 (DaijiworldNews/AK): ರಿಯಲ್ ಸ್ಟಾರ್ ಉಪೇಂದ್ರ ಕಳೆದ ವರ್ಷವಷ್ಟೇ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದರೆ ಎಂದು ವರದಿಯಾಗಿದೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಉಪ್ಪಿ ನಟಿಸಲಿದ್ದಾರೆ. ಅಥರ್ವ ಈ ಸಿನಿಮಾದ ನಾಯಕನಾಗಿದ್ದು, ಉಪ್ಪಿಯದ್ದು ಮಹತ್ವದ ಪಾತ್ರವಂತೆ.
ಪರಭಾಷೆಯ ಸಿನಿಮಾಗಳಲ್ಲಿ ಉಪೇಂದ್ರ ನಟಿಸುವುದು ಹೊಸದೇನೂ ಅಲ್ಲ. ಈಗಾಗಲೇ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಒಂದೂವರೆ ದಶಕದ ಬಳಿಕ ಕೂಲಿ ಚಿತ್ರವನ್ನು ಒಪ್ಪಿಕೊಂಡಿದ್ದರು. ಇದೀಗ ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ಸಿನಿಮಾಗೆ ಉಪ್ಪಿ ಸಹಿ ಮಾಡಿದ್ದಾರೆ.