ಬೆಂಗಳೂರು, ಜು. 06 (DaijiworldNews/AK): ಸ್ಯಾಂಡಲ್ವುಡ್ನ ಜನಪ್ರಿಯ ನಟ ಡಾಲಿ ಧನಂಜಯ್ ಇತ್ತೀಚೆಗೆ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಪತ್ನಿ ಧನ್ಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಧನಂಜಯ್ ತಮ್ಮ ಮುದ್ದಾದ ಮಗುವಿನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಗುವನ್ನು ಮಲಗಿಸಿ ಆಡಿಸುತ್ತಿರೋ ಚಿತ್ರವನ್ನು ಪೋಸ್ಟ್ ಮಾಡಿರುವ ಅವರು, ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ ಈ ಫೋಟೋದಲ್ಲಿ ಧನಂಜಯ್ ಧರಿಸಿರುವ ಶರ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಆ ಕಪ್ಪು ಬಣ್ಣದ ಶರ್ಟ್ ಮೇಲೆ ‘ಮದರ್ ಪ್ರಾಮಿಸ್’ ಎಂದು ಬರೆಯಲಾಗಿದೆ. ತಮ್ಮ ಮುಂಬರುವ ಹೊಸ ಸಿನಿಮಾದ ಪ್ರಚಾರಕ್ಕಾಗಿ ಅವರು ಈ ವಿಭಿನ್ನ ಶರ್ಟ್ ಧರಿಸಿದ್ದು, ಮಗುವಿನ ಆಗಮನದ ಜೊತೆಗೇ ಸಿನಿಮಾದ ಪ್ರಚಾರವನ್ನೂ ಸಖತ್ ಆಗಿಯೇ ಮಾಡುತ್ತಿದ್ದಾರೆ. ತಂದೆಯಾದ ಸಂಭ್ರಮದಲ್ಲಿರುವ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ನಟ ಧನಂಜಯ್ ಹಾಗೂ ಧನ್ಯಾ ಅವರ ವಿವಾಹವು ಕಳೆದ ಫೆಬ್ರವರಿ ತಿಂಗಳಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು