ಬೆಂಗಳೂರು, ಜು. 20 (DaijiworldNews/AA): ಅಪರಿಚಿತ ವ್ಯಕ್ತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಸೀರಿಯಲ್ ನಟಿ ಐಶ್ವರ್ಯಾ ಸಿಂಧೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಫೇಕ್ ಅಕೌಂಟ್ಗಳ ಮೂಲಕ ಅವಹೇಳನಕಾರಿ ಕಾಮೆಂಟ್, ಮಾನಹಾನಿಯಾಗುವಂತಹ ಮೆಸೇಜ್ಗಳು ಮತ್ತು ನಿಂದನಾತ್ಮಕ ಪೋಸ್ಟ್ಗಳನ್ನು ಮಾಡಲಾಗುತ್ತಿದೆ. ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು 2022ರಲ್ಲೂ ಇದೇ ರೀತಿಯ ಕಿರುಕುಳ ಎದುರಿಸಿದ್ದೆ. ಆಗಲೂ ಕರೆ ಮಾಡುವುದು, ಹಿಂಬಾಲಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡಲಾಗಿತ್ತು. ಆ ಪ್ರಕರಣದಲ್ಲೂ ಸಂಜಯನಗರ ಠಾಣೆಗೆ ದೂರು ದಾಖಲಾಗಿತ್ತು ಎಂದಿದ್ದಾರೆ.
ಈ ಬಾರಿಯೂ ಪರಿಚಯದ ವ್ಯಕ್ತಿಯೇ ಬೇರೆ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದು ಕಿರುಕುಳ ನೀಡುತ್ತಿರುವ ಅನುಮಾನವಿದೆ. ದೂರಿನಲ್ಲಿ ಶ್ರೀಮತಿ ಮನ್ನತ್ ನಕುಲ್ ಎಂಬ ಹೆಸರನ್ನೂ ಉಲ್ಲೇಖಿಸಿದ್ದು, ಇದೇ ವ್ಯಕ್ತಿ ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡುತ್ತಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.