ಮುಂಬೈ, ಜು. 21 (DaijiworldNews/AK): ಇತ್ತೀಚೆಗೆ ಬದಲಾಗಿರುವ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಗುರಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಒಂದು ಪೋಸ್ಟ್ ಮೂಲಕ ಟ್ರೋಲ್ಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಎಸ್ಆರ್ಎ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಆ ವೇಳೆ ಅವರ ಮುಖದಲ್ಲಿ ಹಿಂದಿನಂತ ಕಳೆ ಕಾಣಿಸಲಿಲ್ಲ. ಇದರಿಂದ ಅವರ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿದ್ದಂತೆ, ಸಲ್ಮಾನ್ಗೆ ಆರೋಗ್ಯ ಸಮಸ್ಯೆಯೇ?, ಏಕೆ ಇಷ್ಟು ಬದಲಾಗಿದ್ದಾರೆ? ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಕೆಲವರು ಅವರ ವಯಸ್ಸು ಮತ್ತು ಆರೋಗ್ಯದ ಬಗ್ಗೆ ಟ್ರೋಲ್ ಮಾಡಿದ್ದರು.
ಈ ಎಲ್ಲ ಚರ್ಚೆಗಳ ನಡುವೆ ಸಲ್ಮಾನ್ ಖಾನ್ ಸೋಮವಾರ ತಮ್ಮ ಎಕ್ಸ್ ಖಾತೆಯಲ್ಲಿ, ನಿಮ್ಮೆಲ್ಲರ ಆರೋಗ್ಯ ಈಗ ಹೇಗಿದೆ? ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಟ್ರೋಲ್ ಮಾಡಿದವರಿಗೆ ಪರೋಕ್ಷ ತಿರುಗೇಟು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.