ಬೆಂಗಳೂರು, ಜು. 21 (DaijiworldNews/AK): ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಕುಟುಂಬ ಹೊಸದೊಂದು ಫಾರ್ಮ್ಹೌಸ್ನ್ನು ಮಲ್ನಾಡ್ ಪ್ರಾಂತ್ಯದಲ್ಲಿ ಖರೀದಿಸಿದ್ದು, ಇಡೀ ಕುಟುಂಬದ ಸಮ್ಮುಖದಲ್ಲಿ ಗೃಹಪ್ರವೇಶ ನೆರವೇರಿದೆ.

ಮಲೆನಾಡಿನ ಪ್ರಕೃತಿ ಮಡಿಲಲ್ಲಿ ನಿರ್ಮಿತವಾದ ಕನಸಿನ ಗೂಡಿಗೆ `ಕಾಜಾಣ’ ಎಂದು ಹೆಸರಿಟ್ಟಿದ್ದು ಕುಟುಂಬದೊಂದಿದೆ ಸಪ್ತಮಿ ಕನಸಿನ ಗೂಡಿನ ಪೂಜೆ ಮಾಡಿಸಿದ್ದಾರೆ.
ಪ್ರಕೃತಿ ಸೌಂದರ್ಯದ ತವರೂರಾದ ಮಲ್ನಾಡ್ ಪ್ರಾಂತ್ಯದಲ್ಲಿ ಸಪ್ತಮಿ ಗೌಡ ಕುಟುಂಬ ಹೊಸದೊಂದು ಸುಂದರ ಫಾರ್ಮ್ಹೌಸ್ ಖರೀದಿಸಿದ್ದು, ಇಡೀ ಕುಟುಂಬದ ಸಮ್ಮುಖದಲ್ಲಿ ಗೃಹಪ್ರವೇಶ ನೆರವೇರಿದೆ. ಈ ಸಂಭ್ರಮ ಕ್ಷಣಗಳ ಫೋಟೋಗಳನ್ನು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಲೆನಾಡಿನ ತಂಪಾದ ವಾತಾವರಣ, ಸುತ್ತಲೂ ಕಂಗೊಳಿಸುವ ಹಸಿರಿನ ಮಧ್ಯೆ ಇರುವ ಈ ಫಾರ್ಮ್ಹೌಸ್ನಲ್ಲಿ ಸಪ್ರಮಿ ಗೌಡ ಕುಟುಂಬದವರು ಗಣಪತಿ ಪೂಜೆಯನ್ನ ಅತ್ಯಂತ ಶ್ರದ್ದಾ-ಭಕ್ತಿಯಿಂದ ನೆರವೇರಿಸಿದ್ದಾರೆ.