ಮುಂಬೈ, ಜು. 28 (DaijiworldNews/AA): ಪ್ರತಿಷ್ಠಿತ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಮುಂಬೈ ಎಫ್ಸಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಅವರು ವೃತ್ತಿಪರ ಫುಟ್ಬಾಲ್ ಜಗತ್ತಿಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಉದ್ಯಮಿ ಅಲಿ ಅಹ್ಮದ್ ಒಡೆತನದ ಮುಂಬೈ ಎಫ್ಸಿ ತಂಡದೊಂದಿಗೆ ಟೈಗರ್ ಶ್ರಾಫ್ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಅವರು ತಂಡದೊಂದಿಗೆ ನಿಯಮಿತವಾಗಿ ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಕ್ರೀಡಾ ಕೌಶಲ್ಯ ಮತ್ತು ಬದ್ಧತೆಗೆ ತರಬೇತುದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬರುವ ದಿನಗಳಲ್ಲಿ ಅವರು ತಂಡದ ಖಾಯಂ ಸದಸ್ಯರಾಗುವ ಸಾಧ್ಯತೆಯಿದೆ.
ಡ್ಯುರಾಂಡ್ ಕಪ್ ಪಂದ್ಯಾವಳಿಗಳಿಗಾಗಿ ಟೈಗರ್ ಶ್ರಾಫ್ ಮತ್ತು ಅವರ ತಂಡ ಜುಲೈ 30ರಂದು ಶಿಲ್ಲಾಂಗ್ಗೆ ತೆರಳಲಿದೆ. ಇನ್ನು ಈ ಬಗ್ಗೆ ನಟ ಅಥವಾ ಕ್ಲಬ್ನಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.