ಮುಂಬೈ, ಆ. 01 (DaijiworldNews/AA): ಇತ್ತೀಚೆಗೆ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಯುವ ಜನತೆಯ ಪ್ರತಿಭಟನೆ ಹಾಗೂ ಸಂಸ್ಕೃತಿಯ ಬಗ್ಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರ ಹಳೆಯ ಸಿನಿಮಾಗಳ ಪಾತ್ರಗಳ ಫೋಟೋಗಳನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದರು. ಇದೀಗ ಕಂಗನಾ ರಣಾವತ್ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

"ಸಿನಿಮಾದಲ್ಲಿ ನಟಿಸಲು ತಮಗೆ ಕೋಟಿಗಟ್ಟಲೆ ಸಂಭಾವನೆ ಸಿಗುತ್ತದೆ. ಗ್ಲಾಮರ್ ಪ್ರಪಂಚದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಈವೆಂಟ್ ಪ್ಲಾನರ್ಗಳ ನಡುವೆ ನಾನು ಇರುತ್ತೇನೆ. ಈ ಸಿನಿಮಾ ಪಾತ್ರಗಳನ್ನು ನೋಡಿ ಶಾಲಾ-ಕಾಲೇಜು ಅಥವಾ ಕ್ಲಬ್ಗಳಲ್ಲಿ ಅದೇ ರೀತಿ ಮಾಡಲು ಯುವತಿಯರಿಗೆ ಪ್ರೇರೇಪಿಸುವುದು ತಪ್ಪು. ನೈಜ ಜೀವನಕ್ಕೂ ಮತ್ತು ಸಿನಿಮಾಗೂ ತುಂಬಾ ವ್ಯತ್ಯಾಸವಿದೆ. ಇವತ್ತು ಬೇರೆಯವರ ಮಕ್ಕಳನ್ನು ಹಾದಿ ತಪ್ಪಿಸಿದರೆ ನಾಳೆ ನಿಮ್ಮ ಮಕ್ಕಳಿಗೂ ಇದೇ ಪರಿಸ್ಥಿತಿ ಬರುತ್ತದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಇತ್ತೀಚಿನ ಝೆನ್ ಜಿ ಪ್ರತಿಭಟನೆಗಳ ವಿಡಿಯೋಗಳು ತಮಗೆ ಅಸಹ್ಯ ಹುಟ್ಟಿಸಿವೆ. ಪ್ರತಿಭಟನೆಯಲ್ಲಿ ಯುವಕರು ಬಳಸುತ್ತಿರುವ ಭಾಷೆ ಮತ್ತು ವರ್ತನೆ ಭಾರತೀಯ ಸಂಸ್ಕೃತಿಗೆ ತಕ್ಕದಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಕೆಟ್ಟ ಪದಗಳನ್ನು ಬಳಸಿರುವುದು ತಪ್ಪು. ತಾವು ಕೂಡ ವಿದ್ಯಾರ್ಥಿ ದಿನಗಳಲ್ಲಿ ಪ್ರತಿಭಟನೆ ಮಾಡಿದ್ದೆ. ಆದರೆ ಇಂದಿನ ಯುವಕರಲ್ಲಿ ಯಾವುದೇ ಸಂಸ್ಕಾರ ಕಾಣಿಸುತ್ತಿಲ್ಲ" ಎಂದಿದ್ದಾರೆ.