ಮುಂಬೈ, ಆ. 09 (DaijiworldNews/AA): ಭಾರತೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರೊಂದಿಗಿನ ಡೇಟಿಂಗ್ ವದಂತಿಗೆ ನಟಿ ಮೃಣಾಲ್ ಠಾಕೂರ್ ತೆರೆ ಎಳೆದಿದ್ದು, ಸುಳ್ಳು ವದಂತಿ ಹಬ್ಬಿಸಿದವ ವಿರುದ್ಧ ನಟಿ ಗರಂ ಆಗಿದ್ದಾರೆ.

ಯಶಸ್ವಿ ಜೈಸ್ವಾಲ್ ಹಾಗೂ ಮೃಣಾಲ್ ಠಾಕೂರ್ ಒಂದೇ ಕೆಫೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಡೇಟಿಂಗ್ ವದಂತಿ ಹಬ್ಬಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನಟಿ, "ಸ್ವಲ್ಪ ಶಾಂತರಾಗಿ. ನಾವು ಒಟ್ಟಿಗೆ ಎಲ್ಲಿದ್ದೇವೆ ಎಂದು ತೋರಿಸಿ? ವಿದ್ಯಾವಂತರಾಗಿದ್ದುಕೊಂಡು ಇಂತಹ ವದಂತಿಗಳನ್ನು ಹೇಗೆ ನಂಬುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.
"ದೇಶದಲ್ಲಿ ಚರ್ಚಿಸಬೇಕಾದ ವಿಷಯಗಳು ಸಾಕಷ್ಟು ಇವೆ. ಯುವ ಪೀಳಿಗೆಯಿಂದ ಒಳ್ಳೆಯ ವಿಷಯಗಳನ್ನು ಕಲಿಯಿರಿ. ಉಪಯುಕ್ತ ಸಂಗತಿಗಳ ಬಗ್ಗೆ ಧ್ವನಿ ಎತ್ತಿ" ಎಂದು ಹೇಳಿದ್ದಾರೆ.ನಂತರ ಅವರು ಈ ಕಾಮೆಂಟ್ ಅನ್ನು ತೆಗೆದುಹಾಕಿದ್ದಾರೆ. ಆದರೆ ಅದಾಗಲೇ ಇದರ ಸ್ಕ್ರೀನ್ಶಾಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.