ಬೆಂಗಳೂರು, ನ 12 (Daijiworld News/ MB) : ದಿ ಜಿಕ್ಯೂ ಇಂಡಿಯಾ ನೀಡುವ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಗ್ರ ಶ್ರೇಷ್ಠ ಸ್ಥಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ.



ಜಿಕ್ಯೂ ಇಂಡಿಯಾ ದೇಶದ ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿ ಮಾಡಿದ್ದು ನವೆಂಬರ್ 11 ರಂದು ಮುಂಬೈಯಲ್ಲಿ ಸಮಾರಂಭ ಕೈಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿ ಕಾರ್ಯಕ್ರಮದ ಮುಖ್ಯ ಅತಿಥಿ ಕರಣ್ ಜೋಹಾರ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.
ಜಿಕ್ಯೂ ಅಮೆರಿಕಾದ ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಪುರುಷರ ಮಾಸ ಪತ್ರಿಕೆಯಾಗಿದ್ದು, ಭಾರತದ ಅತ್ಯಂತ ಪ್ರಭಾವಶಾಲಿ 50 ಯುವಕರ ಪಟ್ಟಿ ಮಾಡಿತ್ತು. ಈ ಪಟ್ಟಿಯಲ್ಲಿ ಯಶ್ ಒಬ್ಬರಾಗಿದ್ದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಭಾವಶಾಲಿಯಾದ ಭಾರತದ 50 ಯುವ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜಿಕ್ಯೂ ಕಾರ್ಯಕ್ರಮ ನೆರವೇರಿಸಿದೆ.