ಮುಂಬಯಿ, ನ 22 (Daijiworld News/MSP): ತಾಯಿಯಾದ ಬಳಿಕ ಯಾವುದೇ ಚಲನಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತಿಲ್ಲ ಎಂದು ನೇಹಾ ಧುಪಿಯಾ ಬೇಸರಿಸಿಕೊಂಡಿದ್ದರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನೇಹಾ, ಹೆರಿಗೆ ಬಳಿಕ ತಾನು ಬಾಡಿ ಶೇಮಿಂಗ್'ಗೆ ಬಲಿಯಾಗಿದ್ದೇನೆ ಎಂದು ನೊಂದುಕೊಂಡಿದ್ದಾರೆ. ಇನ್ನು ಅವಕಾಶ, ಕೆಲಸ ನಮ್ಮ ಬಳಿ ಬರುತ್ತೆ ಎಂದು ನಾವು ಕಾಯುತ್ತ ಕುಳಿತುಕೊಳ್ಳಬಾರದು. ನಾವು ನಮ್ಮದೆ ಆದ ವೇದಿಕೆ ಸೃಷ್ಟಿಸಬೇಕು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ತಾಯಿಯಾದ್ಮೇಲೆ ನಮ್ಮ ಬಗ್ಗೆ ಇದ್ದ ಅಭಿಪ್ರಾಯ ಬದಲಾಗುತ್ತದೆ. ಗರ್ಭ ಧರಿಸುವ ಮೊದಲು ತುಮ್ಹಾರಿ ಸುಲು ಚಿತ್ರದಲ್ಲಿ ಅಭಿನಯಿಸಿದ್ದೆ. ಅಭಿನಯಕ್ಕೆ ಅವಾರ್ಡ್ ಬಂದಿತ್ತು. ಅದಾದ ನಂತ್ರ ಯಾವುದೇ ಚಿತ್ರಕ್ಕೆ ಆಫರ್ ಬಂದಿಲ್ಲವೆಂದು ನೇಹಾ ಹೇಳಿದ್ದಾರೆ.