ಮುಂಬೈ, ನ.15 (DaijiworldNews/AA): ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮುಂಬೈನ ಜುಹುವಿನಲ್ಲಿರುವ ಪ್ರಸಿದ್ಧ 'ಜಲ್ಸಾ' ಬಂಗಲೆಯ ಮಾಲೀಕತ್ವದ ವಿಚಾರವಾಗಿ ಅವರ ಕುಟುಂಬದಲ್ಲಿ ವಿವಾದ ಉಂಟಾಗಿದೆ.

ಅಮಿತಾಬ್ ಅವರ ಕಿರಿಯ ಸಹೋದರ ಅಜಿತಾಬ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್, 1993ರಲ್ಲಿ ಜಯಾ ಬಚ್ಚನ್ ಅವರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲಾಗಿದೆ ಎನ್ನಲಾದ ಉಡುಗೊರೆ ಪತ್ರದ ಸಿಂಧುತ್ವವನ್ನು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ತಮ್ಮ ಒಪ್ಪಿಗೆ ಇಲ್ಲದೆ ಆಸ್ತಿ ವರ್ಗಾವಣೆ ನಡೆದಿದೆ ಎಂಬುದು ರಮೋಲಾ ಅವರು ಆರೋಪಿಸಿದ್ದಾರೆ.
'ಜಲ್ಸಾ' ಬಂಗಲೆಯನ್ನು ಮೂಲತಃ ತಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿತ್ತು ಎಂದು ರಮೋಲಾ ದೂರಿನಲ್ಲಿ ತಿಳಿಸಿದ್ದಾರೆ. 1993ರಲ್ಲಿ ಸಿದ್ಧಪಡಿಸಲಾದ ಉಡುಗೊರೆ ಪತ್ರಕ್ಕೆ ಸ್ಟಾಂಪ್ ಡ್ಯೂಟಿ ಪಾವತಿಸಿಲ್ಲ. ಅದನ್ನು ಸರಳ ಕಾಗದದಲ್ಲಿ ಸಿದ್ಧಪಡಿಸಲಾಗಿದ್ದು, ಸಾಕ್ಷಿಗಳ ಸಹಿಯೂ ಇಲ್ಲ ಎಂದು ಅವರು ಆರೋಪ ಮಾಡಿದ್ದಾರೆ.
ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ 'ಜಲ್ಸಾ' ಬಂಗಲೆಯ ಮಾಲೀಕರಾಗಿ ಜಯಾ ಬಚ್ಚನ್ ಅವರ ಹೆಸರಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆಸ್ತಿ ಕಾರ್ಡ್ನಲ್ಲಿ ಇನ್ನೂ ರಮೋಲಾ ಬಚ್ಚನ್ ಅವರ ಹೆಸರಿದೆ ಎಂದು ಹೇಳಲಾಗಿದೆ.