ಬೆಂಗಳೂರು, ಜೂ. 04 (Daijiworld News/MB) : ರಕ್ಷಿತ್ ಶೆಟ್ಟಿ ಬರ್ತ್ಡೇ ದಿನವಾದ ಜೂನ್ 6 ರಂದೇ 777 ಚಾರ್ಲಿ ಸಿನಿಮಾದ ಸ್ಪೇಷಲ್ ವಿಡಿಯೋ ರಿಲೀಸ್ ಆಗಲಿದ್ದು ಈ ಮೂಲಕ ಸಿನಿಮಾ ತಂಡ ರಕ್ಷಿತ್ ಶೆಟ್ಟಿಗೆ ಸ್ಪೆಶಲ್ ಗಿಫ್ಟ್ ನೀಡಲಿದೆ.

ಈ ಸ್ಪೆಷಲ್ ವಿಡಿಯೋದಲ್ಲಿ ರಕ್ಷಿತ್ ಪಾತ್ರ ಹಾಗೂ ಈ ಸಿನಿಮಾದಲ್ಲಿ ಚಾರ್ಲಿ ಪಾತ್ರದ ಒಂದು ನೋಟವನ್ನು ಸಿನಿಮಾ ತಂಡ ಬಿಚ್ಚಿಡಲಿದೆ.
ಪರಮ್ವಾ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಪುಷ್ಕರ್ ಫಿಲ್ಮ್ಸ್, ರಕ್ಷಿತ್ ಶೆಟ್ಟಿ ಮತ್ತು ಜಿ ಎಸ್ ಗುಪ್ತಾ ಜಂಟಿಯಾಗಿ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದು ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಸಂಗೀತ ಶೃಂಗೇರಿ ಕೂಡ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಇನ್ನು ಕೆಲವೇ ದೃಶ್ಯಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು ಅವನೆ ಶ್ರೀಮನ್ನಾರಾಯಣ ನಂತರ, ಇದು ರಕ್ಷಿತ್ ಶೆಟ್ಟಿ ಅಭಿನಯದ ಮಹತ್ವದ ಚಿತ್ರವಾಗಿದೆ.
ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡಾ ಈ ಸಿನಿಮಾದ ತಯಾರಿ ನಡೆಯುತ್ತಿದ್ದು ಈ ನಡುವೆ ನಿರ್ದೇಶಕ ಈಗಾಗಲೇ ಚಿತ್ರೀಕರಣ ನಡೆದಿರುವ ಭಾಗಗಳ ಪೋಸ್ಟ್ ಪ್ರೋಡಕ್ಷನ್ ಕೆಲಸಕ್ಕೆ ಕೈ ಹಾಕಿದ್ದಾರೆ.
777 ಚಾರ್ಲಿಗೆ ನೋಬಿನ್ ಪಾಲ್ ಸಂಗೀತ, ಅರವಿಂದ ಕಶ್ಯಪ್ ಅವರ ಛಾಯಾಗ್ರಹಣವಿದ್ದು ಪ್ರತೀಕ್ ಶೆಟ್ಟಿ ಚಿತ್ರದ ಸಂಕಲನ ನಿರ್ವಹಿಸಿದ್ದಾರೆ.