ಮುಂಬೈ, ಜೂ. 26 (DaijiworldNews/MB) : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಾಣದ ಬುಲ್ ಬುಲ್ ಸಿನಿಮಾಗೆ ಪತಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಿವೀವ್ ನೀಡಿ ಸಿನಿಮಾವನ್ನು ನೋಡುವುದನ್ನು ದಯವಿಟ್ಟು ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಸಿನಿಮಾದಲ್ಲಿ ಅದ್ಭುತ ರೀತಿಯಲ್ಲಿ ಕಥೆಯನ್ನು ನಾನು ಇಷ್ಟಪಟ್ಟೆ. ಅಣ್ಣ, ತಂಗಿ ಫುಲ್ ಫೈರ್ ( ಅನುಷ್ಕಾ, ಸಹೋದರ ಕರ್ಣೇಶ್) ಆಗಿದ್ದಾರೆ. ಯಾರೂ ಕೂಡಾ ದಯವಿಟ್ಟು ಮಿಸ್ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಇತ್ತೇಚೆಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಬುಧವಾರ ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆಯಾಗಿ ಪ್ರಶಂಸೆಗೆ ಒಳಗಾಗಿದೆ. ಅನ್ವಿತಾ ದತ್ ನಿರ್ದೇಶನದ ಈ ವೆಬ್ ಸಿನಿಮಾದಲ್ಲಿ ಓರ್ವ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದಲ್ಲಿ ರಾಹುಲ್ ಬೋಸ್, ತೃಪ್ತಿ ದಿಮಿ, ಅವಿನಾಶ್ ತಿವಾರಿ, ಪರಂಬ್ರತ ಚಟ್ಟೋಪಾಧ್ಯಾಯ ತಾರಾಗಣದಲ್ಲಿದ್ದಾರೆ.