ಮುಂಬೈ, ಜು. 01 (DaijiworldNews/MB) : ಕನ್ನಡ ಚಿತ್ರರಂಗವನ್ನು ಭಾರತದಲ್ಲೇ ಖ್ಯಾತಗೊಳಿಸಿದ ಕೆಜಿಎಫ್ ಸಿನಿಮಾದ ಭಾಗ 2 ರ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ನಟಿ ರವೀನಾ ಟಂಡನ್ ತಿಳಿಸಿದ್ದು ಈ ಸಿನಿಮಾದಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನಾನು ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ನಾನೇ ಹೀರೋ ನಾನೇ ವಿಲನ್ ಆಗಿದ್ದೇನೆ. ಇದು ತುಂಬಾ ಆಸಕ್ತಿ ಹುಟ್ಟಿಸಲಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರವೀನಾ ಟಂಡನ್ ಈಗಾಗಲೇ ಕೆಜಿಎಫ್-2 ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದ ಚಿತ್ರೀಕರಣ ಮುಗಿಸಿದ್ದಾರೆ. ೨೦೧೮ ರಲ್ಲಿ ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಎರಡನೇ ಭಾಗವು ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು ಹಿಂದಿ, ಮಳಯಾಲಂ, ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಡಬ್ ಆಗಲಿದೆ. ಈ ಸಿನಿಮಾದಲ್ಲಿ ಅಧೀರ ಪಾತ್ರದಲ್ಲಿ ನಟ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ.